ಜೂ.1ರಿಂದ7 ರವರೆಗೆ ಬೈಪಾಸ್ ರಸ್ತೆ ದರ್ಶನ್ ಕಲಾಮಂದಿರದಲ್ಲಿ ವೀಣಾ ಬನ್ನಂಜೆಯವರಿಂದ ಶ್ರೀಮದ್ಭಾಗವತ ಪ್ರವಚನ ಸಪ್ತಾಹ

0

ಪುತ್ತೂರು: ಶ್ರೀ ವೇದವ್ಯಾಸ ವಿರಚಿತ ಪುರಾಣರಾಜ ಎಂದೇ ಪ್ರಖ್ಯಾತನಾದ ಶ್ರೀಮದ್ಭಾಗವತ ಪ್ರವಚನವನ್ನು ವಾಗ್ಮಿ ವೀಣಾ ಬನ್ನಂಜೆಯವರು ಜೂ.1ರಿಂದ 7 ರನತಕ ಸಂಜೆ ಗಂಟೆ 6 ರಿಂದ ಪುತ್ತೂರು ಬೈಪಾಸ್ ರಸ್ತೆಯ ಸ್ವಾಮಿ ಕಲಾಮಂದಿರ ದರ್ಶನ್ ಕಲಾಮಂದಿರದಲ್ಲಿ ನಡೆಸಿಕೊಡಲಿದ್ದಾರೆ ಎಂದು ಜಿ.ಎಲ್.ಸಮೂಹ ಸಂಸ್ಥೆಗಳ ಮಾಲಕ ಬಲರಾಮ ಆಚಾರ್ಯ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಬಹುವಚನಂ ಪುತ್ತೂರು ಇದರ ಸಂಯೋಜನೆಯಲ್ಲಿ ದಿ.ಜಿ.ಎಲ್.ಆಚಾರ್ಯ ಜನ್ಮಶತಾಬ್ದಿ ಸಮಿತಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಪುತ್ತೂರು, ಸ್ವಾಮಿ ಕಲಾಕ ಮಂದಿರದ ಸಂಯುಕ್ತ ಆಶ್ರಯದಲ್ಲಿ ಈ ಸಪ್ತಾಹ ಆಯೋಜಿಸಲಾಗಿದೆ. ಭಾರತೀಯ ಮೌಲ್ಯಗಳನ್ನು ಎಲ್ಲರಿಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದೇವೆ. ಇವತ್ತಿನ ಗೊಂದಲಗಳಿಗೆ, ಪರಿಹಾರ, ಬದುಕಿನ ಭಾಗ್ಯವನ್ನು ಇಂತಹ ಪ್ರವಚನದ ಮೂಲಕ ಸಿಗುತ್ತದೆ ಎಂದವರು ಜೂ.1ರ ಸಂಜೆ ಗಂಟೆ 5.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ಸರಕಾರಿ ವೈದ್ಯ ಡಾ ರಘು ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಅಭ್ಯಾಗತರಾಗಿ ಭಾಗವಹಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಪ್ರವಚನ ಆರಂಭಗೊಳ್ಳಲಿದೆ. ಪ್ರತಿ ದಿನ ಸಂಜೆ ಪ್ರವಚನ ನಡೆಯಲಿದೆ. ಜೂ.7ರಂದು ಸಂಜೆ ಗಂಟೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ಸಮಾರೋಪ ಭಾಷಣ ಮಾಡಲಿದ್ದಾರೆ. ಬೀರುಮಲೆ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಸಾಜ ರಾಧಾಕೃಷ್ಣ ಅವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.


ಸನಾತನ ಧರ್ಮದ ಅನುಯಾಯಿಗಳು ಆಲಿಸಬೇಕಾದ ಪುರಾಣ:
ಬಹುವಚನಂ ಪುತ್ತೂರು ಸಂಸ್ಥೆಯ ಸಂಚಾಲಕ ಡಾ. ಶ್ರೀಶ ಕುಮಾರ ಯಂ.ಕೆ ಅವರು ಮಾತನಾಡಿ, ಹದಿನೆಂಟು ಪುರಾಣಗಳಲ್ಲಿ ಶ್ರೀಮದ್ಭಾಗವತವೂ ಒಂದು. ಸನಾತನ ಧರ್ಮದ ಅನುಯಾಯಿಗಳೆಲ್ಲರೂ ಆಲಿಸಬೇಕಾದ ಪುರಾಣವಿದು. ಪರೀಕ್ಷಿತರಾಜನ ಜ್ಞಾನಜಿಜ್ಞಾಸೆಗೆ ಶುಕಮುನಿಯ ಪಥಾನ್ವೇಷಣೆಯನ್ನು ಪುರಾಣ ಪ್ರತಿಪಾದಿಸುತ್ತದೆ. ಸನಾತನಾ ಧರ್ಮದ ಅರಿವನ್ನು ನೀಡುವ ಆಲೊಚನೆಯಿಂದ ಈ ಪ್ರವಚನವನ್ನು ಏರ್ಪಡಿಸಲಾಗಿದೆ. ಆಸಕ್ತರು ಕ್ಲಪ್ತಸಮಯಕ್ಕೆ ಭಾಗವಹಿಸುವಂತೆ ಅವರು ವಿನಂತಿಸಿದರು. ಪತ್ರಿಕಾಗೋಷ್ಟಿಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಸ್ವಾಮಿ ಕಲಾಮಂದಿರದ ಮಾಧವ ಸ್ವಾಮಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here