ರೋಟರಿ ಉಪ್ಪಿನಂಗಡಿ, ರೋಟರಿ ಚಾರಿಟೇಬಲ್ ಟ್ರಸ್ಟ್ ನಿಂದ ನೀರು ಶುದ್ಧೀಕರಣ ಯಂತ್ರ “ರೋಟಾ ಜಲ್” ಉದ್ಘಾಟನೆ

0

ಪುತ್ತೂರು: ರೋಟರಿ ಕ್ಲಬ್ ಉಪ್ಪಿನಂಗಡಿ ಹಾಗೂ ರೋಟರಿ ಚಾರಿಟೇಬಲ್ ಟ್ರಸ್ಟ್ ಉಪ್ಪಿನಂಗಡಿ ಇದರ ಸಹಯೋಗದಲ್ಲಿ ನೀರು ಶುದ್ಧೀಕರಣ ಯಂತ್ರ “ರೋಟಾ ಜಲ್” ಕಾರ್ಯಕ್ರಮವು ಮೇ 21 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಜರಗಿತು.

ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್ ರವರು ರೋಟಾ ಜಲ್ ಕಾರ್ಯಕ್ರಮವನ್ನು ಉದ್ಘಾಟಿಸಿ, ರೋಟರಿ ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಯಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಅವಿನಾಶ್ ಎಚ್, ರೋಟರಿ ಕ್ಲಬ್ ಉಪ್ಪಿನಂಗಡಿ ಅಧ್ಯಕ್ಷ ನವೀನ್ ಬ್ರ್ಯಾಗ್ಸ್, ಕಾರ್ಯದರ್ಶಿ ಕೇಶವ ಪಿ.ಎಂ, ಕೋಶಾಧಿಕಾರಿ ಸ್ವರ್ಣಲತಾ ಪೊಸವಳಿಕೆ, ರೋಟರಿ ಚಾರಿಟೇಬಲ್ ಟ್ರಸ್ಟ್ ಉಪ್ಪಿನಂಗಡಿ ಅಧ್ಯಕ್ಷ ಎಂ.ಜಿ ಅಬೂಬಕ್ಕರ್ ಪುತ್ತು, ಕಾರ್ಯದರ್ಶಿ  ಜಗದೀಶ್ ನಾಯಕ್, ಕೋಶಾಧಿಕಾರಿ ಚಂದಪ್ಪ ಮೂಲ್ಯ, ಸದಸ್ಯರಾದ ಶ್ರೀಕಾಂತ್ ಪಟೇಲ್, ವಂದನಾ ಮುದಲಾಜೆ, ಡಾ.ನಿರಂಜನ್ ರೈ, ಅನಿತಾ ಕ್ರಾಸ್ತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here