ನಾಳೆ ಬೊಳಿಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನೇತ್ರಾವತಿ ಎ ಸೇವಾ ನಿವೃತ್ತಿ

0

ಪುತ್ತೂರು: ಬೊಳಿಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನೇತ್ರಾವತಿ ಎ ಅವರು ಶಿಕ್ಷಕ ವೃತ್ತಿಯಲ್ಲಿ ಸುದೀರ್ಘ 29 ವರ್ಷ 5 ತಿಂಗಳು ಸೇವೆ ಪೂರ್ಣಗೊಳಿಸಿ ಮೇ.31 ರಂದು ನಿವೃತ್ತಿ ಹೊಂದಲಿದ್ದಾರೆ.


ಕಡಬ ತಾಲ್ಲೂಕು ಚಾರ್ವಾಕ ಗ್ರಾಮದ ಅಬಿಕಾರ ದೇವಣ್ಣ ಗೌಡ ಮತ್ತು ಕೂಸಕ್ಕ ದಂಪತಿಯ ಪುತ್ರಿಯಾಗಿರುವ ನೇತ್ರಾವತಿ ಎ 18.01.1996 ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ಡಹೊಳೆ ಇಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ, ನಂತರ ಹಿರಿಯ ಪ್ರಾಥಮಿಕ ಶಾಲೆ ದರ್ಬೆತ್ತಡ್ಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಳಿಕಳದಲ್ಲಿ ನಿಯೋಜನೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆದಂಬಾಡಿ ಮತ್ತು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ತಿಂಗಳಾಡಿ ಇಲ್ಲಿ ಸೇವೆಯನ್ನು ಸಲ್ಲಿಸಿ, ಹಿರಿಯ ಪ್ರಾಥಮಿಕ ಶಾಲೆ ಬೊಳಿಕಳ ಇಲ್ಲಿ 31.05.2025 ರಂದು ನಿವೃತ್ತಿ ಹೊಂದಲಿದ್ದಾರೆ. ಇವರು BSNL ನಿವೃತ್ತ ಉದ್ಯೋಗಿಯಾಗಿರುವ ಪತಿ ಕೆ. ರಾಧಾಕೃಷ್ಣ ಗೌಡ, ಮಕ್ಕಳಾದ ನವ್ಯಶ್ರೀ ಕೆ. ಮತ್ತು ಶ್ರಾವ್ಯ ಕೆ. ಇವರೊಂದಿಗೆ ಶ್ರೀನಿಲಯ ಕುಂಬ್ರ ಕೋನಡ್ಕ ಇಲ್ಲಿ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here