ರಾಮಕುಂಜ: ಶ್ರೀ ರಾಮಕುಂಜೇಶ್ವರ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ ಜೂ.2ರಂದು ನಡೆಯಿತು.
ಪ್ರಸಕ್ತ ಶೈಕ್ಷಣಿಕ ಸಾಲಿನ ಮೊದಲ ದಿನದಂದು ತರಗತಿಗೆ ಆಗಮಿಸುತ್ತಿದ್ದ ಮಕ್ಕಳ ಮುಖದಲ್ಲಿ ಮಂದಹಾಸವಿತ್ತು. ಆರತಿ ಬೆಳಗಿ, ಹಣೆಗೆ ತಿಲಕ ಇಟ್ಟು, ಹೂಗಳನ್ನು ಹಾಕುವುದರ ಮೂಲಕ ಶ್ರೀರಾಮಕುಂಜೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಸಂಚಾಲಕರಾದ ಶಿವಪ್ರಸಾದ್, ಪ್ರಾಂಶುಪಾಲರಾದ ಪ್ರವೀದ್ ಪಿ., ಹಾಗೂ ಎಲ್ಲಾ ಶಿಕ್ಷಕ-ಶಿಕ್ಷಕಿಯರು ವಿದ್ಯಾರ್ಥಿಗಳನ್ನು ಬರಮಾಡಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ವಿದ್ಯಾರ್ಥಿಗಳನ್ನು ಸ್ವಾಗತಿಸಿದ ನಂತರ ವಿದ್ಯಾರ್ಥಿಗಳು ತಮ್ಮ ತಮ್ಮ ತರಗತಿಯನ್ನು ವಿಶೇಷ ರೀತಿಯಲ್ಲಿ ಪ್ರವೇಶಿಸಿದರು. ಇದೀಗ ಶಾಲೆ ಆರಂಭವಾಗಿದ್ದು, ಶಾಲೆಗೆ ಆಗಮಿಸುತ್ತಿದ್ದಂತೆ 2 ತಿಂಗಳು ಒಬ್ಬರನ್ನೊಬ್ಬರು ಬಿಟ್ಟಿದ್ದ ಮಕ್ಕಳು ಪರಸ್ಪರ ಖುಷಲೋಪರಿ ವಿಚಾರಿಸಿಕೊಳ್ಳುತ್ತಿದ್ದರು. ತಾವುಗಳು ರಜೆಯಲ್ಲಿ ಮಾಡಿದ ಕೆಲಸ, ಟ್ರಿಪ್‌ಗಳ ಬಗ್ಗೆ ಹೇಳಿಕೊಂಡು ಸಂಭ್ರಮಿಸಿದರು. ಕಾರ್ಯಕ್ರಮದ ಕೊನೆಗೆ ಸಿಹಿ ತಿಂಡಿ ವಿತರಿಸಲಾಯಿತು.