ಪುತ್ತೂರು: ಏಳನೇ ವರುಷದ ಹಲಸು-ಹಣ್ಣು ಮೇಳಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.
ಪುತ್ತೂರು ಕಿಲ್ಲೆ ಮೈದಾನದಲ್ಲಿ ಜೂ.6 ರಿಂದ 8 ತನಕ ಮೇಳ ದಿನಪೂರ್ತಿ ಮೇಳವು ನಡೆಯಲಿದೆ. ಎಲ್ಲರ ಬಾಯಲ್ಲಿ ನೀರೂರಿಸುವ ಹಲಸು ಹಣ್ಣಿನ ಮೇಳಕ್ಕೆ ಮೊದಲ ದಿನವೇ ಉತ್ತಮ ಸ್ಪಂದನೆ ದೊರಕಿದ್ದು, ವಿವಿಧ ಬಗೆಯ ಹಲಸಿನಹಣ್ಣು ಹಾಗೂ ಹಲಸಿನ ಖಾದ್ಯಗಳನ್ನು ಖರೀದಿಸಲು ಜನ ಉತ್ಸುಕರಾಗಿದ್ದರು.