ಪುಣಚ: ಆಂಬುಲೆನ್ಸ್‌ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಅಸ್ಸಾಂ ಮೂಲದ ಪಾರ್ವತಿ

0

ಪುಣಚ:ಇಲ್ಲಿನ ಕಲ್ಪವೃಕ್ಷ ಫ್ರೆಂಡ್ಸ್ ಆಂಬುಲೆನ್ಸ್‌ನಲ್ಲಿ ಗರ್ಭಿಣಿಯೋರ್ವರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಜೂ.6ರಂದು ನಡೆದಿದೆ.

ಪುಣಚ ಅಜ್ಜಿನಡ್ಕ ಸಮೀಪದ ಎನ್.ಎಸ್.ಕ್ರೆಷರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಸ್ಸಾಂ ಮೂಲದ ನಿಪಿನ್‌ರವರ ಪತ್ನಿ ಪಾರ್ವತಿ ಎಂಬವರಿಗೆ ಜೂ.6ರಂದು ರಾತ್ರಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು.

ಕೂಡಲೇ ಅವರನ್ನು ಪುಣಚ ಕಲ್ಪವೃಕ್ಷ ಫ್ರೆಂಡ್ಸ್ ಆಂಬುಲೆನ್ಸ್‌ನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಪರ್ಲಡ್ಕ ತಲುಪುತ್ತಿದ್ದಂತೆ ಆಕೆಗೆ ಆಂಬುಲೆನ್ಸ್‌ನಲ್ಲಿಯೇ ಹೆರಿಗೆಯಾಯಿತು.ಪಾರ್ವತಿಯವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಪಾರ್ವತಿಯವರ ಪತಿ ನಿಪಿನ್ ಹಾಗೂ ಮನೆಯವರು ಜೊತೆಗಿದ್ದರು.ಶಾಫಿ ಅಜ್ಜಿನಡ್ಕ, ಕಲ್ಪವೃಕ್ಷ ಫ್ರೆಂಡ್ಸ್ ಆಂಬುಲೆನ್ಸ್ ಚಾಲಕ-ಮಾಲಕ ಪ್ರಕಾಶ್ ಪಾಟಾಳಿ ಸಹಕರಿಸಿದರು.ತಾಯಿ,ಮಗು ಆರೋಗ್ಯವಾಗಿದ್ದು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here