ನೆಲ್ಯಾಡಿ: ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಪ್ರಾಯೋಜಿತ ಪುತ್ತೂರು ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ಬಿಲ್ಡಿಂಗ್ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆಯು ಜೂ.8ರಂದು ಯಶಸ್ವಿ 12ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಜೂ.8ರಂದು ಬೆಳಿಗ್ಗೆ ನೆಲ್ಯಾಡಿ ಡೆಂಜ ಕಾಂಪ್ಲೆಕ್ಸ್ನಲ್ಲಿರುವ ಶಾಖಾ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ ನಡೆಯಿತು. ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಅರ್ಚಕ ಶ್ರೀಧರ ನೂಜಿನ್ನಾಯ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು.
ಬಳಿಕ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು 2002ರಲ್ಲಿ ಪುತ್ತೂರಿನಲ್ಲಿ ಆರಂಭಗೊಂಡಿದ್ದು 2014ರಲ್ಲಿ ಸಂಘದ 4ನೇ ನೆಲ್ಯಾಡಿ ಶಾಖೆ ಆರಂಭಗೊAಡಿದೆ. ಕಳೆದ ವರ್ಷ ನೆಲ್ಯಾಡಿ ಶಾಖೆಯ ದಶಮಾನೋತ್ಸವ ಸಮಾರಂಭ ಆಚರಿಸಲಾಗಿದೆ. ಇದೀಗ ಸಂಘ 11 ವರ್ಷ ಪೂರ್ಣಗೊಳಿಸಿ 12ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಪ್ರಸ್ತುತ ಸಂಘವು ಒಟ್ಟು 10 ಶಾಖೆಗಳನ್ನು ಹೊಂದಿದ್ದು ಈ ಭಾಗದ ಗ್ರಾಹಕರ ಸಹಕಾರದೊಂದಿಗೆ ನೆಲ್ಯಾಡಿ ಶಾಖೆಯಲ್ಲಿ ಅತ್ಯುತ್ತಮ ವ್ಯವಹಾರ ನಡೆಯುತ್ತಿದೆ. 2024-25ನೇ ಸಾಲಿನಲ್ಲಿ ನೆಲ್ಯಾಡಿ ಶಾಖೆಯಲ್ಲಿ 54.43 ಕೋಟಿ ರೂ.ವ್ಯವಹಾರ ನಡೆದಿದೆ. 12.27 ಕೋಟಿ ರೂ.ಠೇವಣಿ ಸಂಗ್ರಹವಾಗಿದೆ. 12.86 ಕೋಟಿ ರೂ.ಸಾಲ ವಿತರಣೆಯಾಗಿದ್ದು 98.46 ಶೇ. ವಸೂಲಾತಿಯಾಗಿದೆ ಎಂದರು. ಸಂಘದ 10 ಶಾಖೆಗಳಲ್ಲೂ ಉತ್ತಮ ವ್ಯವಹಾರ ನಡೆಯುತ್ತಿದೆ. ಈ ವರ್ಷ ಒಟ್ಟು ರೂ.744 ಕೋಟಿಗೂ ಹೆಚ್ಚು ವ್ಯವಹಾರ ನಡೆದಿದೆ. ಎಲ್ಲರ ಸಹಕಾರದಿಂದ ಸಂಘ ನಿರಂತರವಾಗಿ ಬೆಳವಣಿಗೆಯಾಗುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷ ರಾಮಕೃಷ್ಣ ಗೌಡ ಯು.ಪಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ನಿರ್ದೇಶಕರೂ, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಉಪಾಧ್ಯಕ್ಷರೂ ಆದ ಸುಪ್ರಿತಾ ರವಿಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ ಗೌಡ ಕಣಜಾಲು, ನಿರ್ದೇಶಕಿ ತೇಜಸ್ವಿನಿಶೇಖರ ಗೌಡ, ಮಾಜಿ ನಿರ್ದೇಶಕ ನಾಗೇಶ್ ನಳಿಯಾರು, ಶಾಖಾ ಸಲಹಾ ಸಮಿತಿ ಸದಸ್ಯರಾದ ಸುಂದರ ಗೌಡ ಅತ್ರಿಜಾಲು, ರಾಧಾಕೃಷ್ಣ ಗೌಡ ಕೆರ್ನಡ್ಕ, ನೋಣಯ್ಯ ಗೌಡ ಡೆಬ್ಬೇಲಿ, ಡೊಂಬಯ್ಯ ಗೌಡ ಶಿರಾಡಿ, ಜಿನ್ನಪ್ಪ ಗೌಡ ಪೊಸೊಳಿಗೆ, ಸುರೇಶ ಪಡಿಪಂಡ, ಸುಲತಾಮೋಹನಚಂದ್ರ, ಕಡಬ ಶಾಖಾ ಮೇನೇಜರ್ ಶಿವಪ್ರಸಾದ್, ಉಪ್ಪಿನಂಗಡಿ ಶಾಖಾ ಮೇನೇಜರ್ ರೇವತಿ, ಸಿಬ್ಬಂದಿಗಳಾದ ಜಯಂತ್, ರಾಧಾಕೃಷ್ಣ, ಭವಿತ್ರಾಜ್, ವಿಟ್ಲ ಶಾಖಾ ಮೇನೇಜರ್ ದಿನೇಶ್, ಕುಂಬ್ರ ಶಾಖಾ ಮೇನೇಜರ್ ಹರೀಶ್, ಆಲಂಕಾರು ಶಾಖಾ ಮೇನೇಜರ್ ಪ್ರೀತಮ್, ಸಿಬ್ಬಂದಿ ರಾಜೇಶ್, ಪುತ್ತೂರು ಎಪಿಎಂಸಿ ರಸ್ತೆ ಶಾಖೆ ಸಿಬ್ಬಂದಿ ಯಶ್ವಿತ್, ಗ್ರಾಹಕರಾದ ಗುಮ್ಮಣ್ಣ ಗೌಡ ಪುಚ್ಚೇರಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಡೆಂಜ ಕಾಂಪ್ಲೆಕ್ಸ್ ಮಾಲಕ ಪುರಂದರ ಗೌಡ ಡೆಂಜ, ಇಂಜಿನಿಯರ್ ನರೇಶ್ ಡಿ.ಎಸ್., ಧನಂಜಯ ಗೌಡ ಅಲೆಕ್ಕಿ, ಕೊರಗಪ್ಪ ಗೌಡ ಕಲ್ಲಡ್ಕ, ಕರಿಯಪ್ಪ ಗೌಡ ಅಲಂಬಿಲ, ವೆಂಕಪ್ಪ ಗೌಡ ಅಲಂಬಿಲ, ಉಮೇಶ್ ಗೌಡ ನೆಲ್ಯಾಡಿ, ನೆಲ್ಯಾಡಿ ಶಿವ ಎಲೆಕ್ಟ್ರಾನಿಕ್ಸ್ನ ಪ್ರಶಾಂತ್, ದಯಾನಂದ ಪೊಜ್ಜಾಳ, ಯದುಶ್ರೀ ಡೆಂಜ, ವಿನಾಯಕ ಸ್ಟೋರ್ನ ಮನೋಜ್ಕುಮಾರ್, ವಾಮನ ಗೌಡ, ಚಂದ್ರಶೇಖರ ಡೆಂಜ, ನೆಲ್ಯಾಡಿ ಗ್ರಾ.ಪಂ.ಸದಸ್ಯ ಆನಂದ ಗೌಡ ಪಿಲವೂರು, ಧರ್ಣಪ್ಪ ಗೌಡ ಕುಡ್ತಾಜೆ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.
ಗೌರವಾರ್ಪಣೆ:
ನೆಲ್ಯಾಡಿ ಶಾಖೆಯಿಂದ ಉಪ್ಪಿನಂಗಡಿ ಶಾಖೆಗೆ ವರ್ಗಾವಣೆಗೊಂಡ ಜಯಂತಕುಮಾರ್ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.
ಸಂಘದ ನಿರ್ದೇಶಕರು, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಅಧ್ಯಕ್ಷರೂ ಆದ ಪ್ರವೀಣ್ ಕುಂಟ್ಯಾನ ಸ್ವಾಗತಿಸಿದರು. ನೆಲ್ಯಾಡಿ ಶಾಖಾ ಮೇನೇಜರ್ ವಿನೋದ್ರಾಜ್ ಎಸ್. ವಂದಿಸಿದರು. ಸಂಘದ ಸಿಬ್ಬಂದಿಗಳಾದ ವಿಜಯಕುಮಾರ್ ಎಂ., ಅಜಿತ್ಕುಮಾರ್ ಬಿ.ಕೆ.,ಪಿಗ್ಮಿ ಸಂಗ್ರಾಹಕರಾದ ಶಿವಪ್ರಸಾದ್, ತಿರ್ಥೇಶ್ವರ ಯು.ಸಹಕರಿಸಿದರು.