ಕಾಣಿಯೂರು ಪ್ರಗತಿಯಲ್ಲಿ pri-kg, lkg, ukg ಪ್ರಾರಂಭೋತ್ಸವ- ವಿಶ್ವ ಪರಿಸರ ದಿನಾಚರಣೆ

0

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ Pre- K G, LKG ಶಾಲಾರಂಭೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಮಕ್ಕಳನ್ನು ಬ್ಯಾಂಡ್ ವಾದ್ಯದೊಂದಿಗೆ ತರಗತಿಗೆ ಬರಮಾಡಿಕೊಳ್ಳಲಾಯಿತು. ಪುಟ್ಟ ಪುಟ್ಟ ಹೆಜ್ಜೆಯೊಂದಿಗೆ ತರಗತಿಗೆ ಪ್ರವೇಶಿಸಿದ ಪುಟಾಣಿಗಳನ್ನು ದೀಪಾರತಿ ಮಾಡಿ ತಿಲಕವನ್ನಿಟ್ಟು ಸ್ವಾಗತಸಲಾಯಿತು. ತರಗತಿಯ ಕೊಠಡಿಯೆಲ್ಲ ಅಲಂಕಾರಗೊಂಡು ವಿಶೇಷ ಮೆರುಗನ್ನು ನೀಡಿತು. ಶಾಲಾ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ ಅವರು ದೀಪ ಬೆಳಗಿಸಿ, ಶಾರದಾ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಸಹ ಆಡಳಿತಾಧಿಕಾರಿ ಹೇಮಾ ನಾಗೇಶ್ ರೈ, ಮುಖ್ಯಗುರುಗಳಾದ ನಾರಾಯಣ ಭಟ್, ವಿನಯ. ವಿ ಶೆಟ್ಟಿ, ಆಂಗ್ಲ ಮಾಧ್ಯಮದ ಸಹ ಮುಖ್ಯಸ್ಥೆ ಅನಿತಾ ಜೆ ರೈ, ಶಿಕ್ಷಕಿಯರಾದ ಸವಿತಾ, ಶೃತಿ, ಸುಚೇತ, ರಚನಾ, ರೇವತಿ, ಪ್ರತಿಭಾ, ಕವಿತಾ ರೈ ಹಾಗೂ ಪೋಷಕ ಬಂಧುಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here