ಸೂರಂಬೈಲು ಶಾಲಾ ಮಂತ್ರಿಮಂಡಲ ರಚನೆ

0

ಶಾಲಾ ನಾಯಕನಾಗಿ ಚೇತನ್ ಎಸ್, ಉಪ ನಾಯಕಿಯಾಗಿ ಶ್ರಾವಣಿ ಡಿ ಆಯ್ಕೆ

ನಿಡ್ಪಳ್ಳಿ: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲು ಇದರ 2025-26 ನೇ ಶೈಕ್ಷಣಿಕ ಸಾಲಿನ ಶಾಲಾ ನಡೆದ ಡಿಜಿಟಲ್ ಶಾಲಾ ಸಂಸತ್ತು ಚುನಾವಣಾ ಪ್ರಕ್ರಿಯೆಯ ಮೂಲಕ ನಡೆಯಿತು. 

ಅತ್ಯಧಿಕ ಮತ ಪಡೆಯುವ ಮೂಲಕ ಏಳನೇ ತರಗತಿಯ ಚೇತನ್ ಎಸ್ ಶಾಲಾ ನಾಯಕನಾಗಿ ಹಾಗೂ ಆರನೇ ತರಗತಿಯ ಶ್ರಾವಣಿ ಡಿ ಉಪನಾಯಕಿಯಾಗಿ ಆಯ್ಕೆಗೊಂಡರು. ನಂತರ ಮಂತ್ರಿಮಂಡಲದ ವಿವಿಧ ಖಾತೆಗಳನ್ನು ಹಂಚಲಾಯಿತು ಮತ್ತು ವಿವಿಧ ಕ್ಲಬ್ ಗಳನ್ನು ರಚಿಸಲಾಯಿತು. ಚುನಾವಣಾ ಪ್ರಕ್ರಿಯೆಯ ನೋಡೆಲ್ ಆಗಿ ಸಮಾಜ ವಿಜ್ಞಾನ ಶಿಕ್ಷಕಿ ಪವಿತ್ರ ಎಂ ಆರ್ ಕಾರ್ಯ ನಿರ್ವಹಿಸಿದರು. ಮುಖ್ಯಗುರು ಊರ್ಮಿಳಾ ಕೆ ಮಾರ್ಗದರ್ಶನ ನೀಡಿದರು. ಸಹಶಿಕ್ಷಕ ನಾಗೇಶ್ ಪಾಟಾಳಿ, ಅತಿಥಿ ಶಿಕ್ಷಕಿ ಸುಪ್ರೀತ, ಗೌರವ ಶಿಕ್ಷಕಿ ಯಶಸ್ವಿನಿ, ವಿದ್ಯಾಲಕ್ಷ್ಮೀ  ಚುನಾವಣೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here