ವ್ಯಕ್ತಿತ್ವ ವಿಕಸನ ಮತ್ತು ತರಬೇತಿಯ ಅಂತರಾಷ್ಟ್ರೀಯ ಸಂಸ್ಥೆಯಾದ ಜೇಸಿಐನ ವಲಯ 15ರ ಮಧ್ಯಂತರ ಸಮ್ಮೇಳನದಲ್ಲಿ 53 ವರ್ಷಗಳ ಇತಿಹಾಸವಿರುವ ವಲಯದ ಅತ್ಯಂತ ದೊಡ್ಡ ಜೆಸಿಐ ಘಟಕವಾಗಿರುವ ಜೆಸಿಐ ಪುತ್ತೂರಿಗೆ 2025ರ ಸಾಲಿನಲ್ಲಿ “ಡ್ರಗ್ಸ್ ಮುಕ್ತ ಪುತ್ತೂರು”, ಜಾಗೃತಿ ಕಾರ್ಯಕ್ರಮಗಳು, ವಿವಿಧ ವಿಶೇಷ ತರಬೇತಿ ಶಿಬಿರಗಳ ಆಯೋಜನೆಗಾಗಿ ವಿವಿಧ ಪ್ರಶಸ್ತಿಗಳ ಗೌರವ ಲಭಿಸಿದೆ .
ಜೆಸಿಐ ವಲಯ 15ರ ಮಧ್ಯಂತರ ಸಮ್ಮೇಳನವನ್ನು ಜೆಸಿಐ ಬೆಳ್ಮಣ್ಣು ಘಟಕವು ಜೂನ್ 8ರಂದು ಸನ್ಮಾನ್ ರೆಸಿಡೆನ್ಸಿ ನಿಟ್ಟೆ, ಕಾರ್ಕಳ ಇಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಜೆಸಿಐ ಪುತ್ತೂರು ಘಟಕಕ್ಕೆ outstanding special project award, outstanding local organisation runner award , Diamond LO award ದೊರಕಿದೆ. ಈ ಪ್ರಶಸ್ತಿಗಳನ್ನು ಜೆಸಿಐ ವಲಯ 15ರ ಅಧ್ಯಕ್ಷರಾದ ಜೆಸಿ ಅಭಿಲಾಶ್, ವಲಯ ಉಪಾಧ್ಯಕ್ಷರಾದ ಜೆಸಿ ಸುಹಾಸ್ ಮರಿಕೆ ರವರು ಜೆ ಸಿ ಐ ಪುತ್ತೂರಿನ ಅಧ್ಯಕ್ಷರಾದ ಭಾಗ್ಯೇಶ್ ರೈ ಅವರಿಗೆ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಜೆಸಿಐ ಪುತ್ತೂರು ಘಟಕದ ಜಂಟಿ ಕಾರ್ಯದರ್ಶಿ ಜೆಸಿ ರಂಜಿನಿ ಶೆಟ್ಟಿ, ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷರಾದ ಜೆಸಿ ವಿಘ್ನೇಶ್, ನಳಪಾಕ ಸಂಯೋಜಕರಾದ ಜೆಸಿ ಸತೀಶ್ ನಾಯ್ಕ ರವರು ಉಪಸ್ಥಿತರಿದ್ದರು