
ಪುತ್ತೂರು: ಬೆಳೆಯುತ್ತಿರುವ ಪುತ್ತೂರಿಗೆ ಮತ್ತೊಂದು ಗರಿಯಾಗಿ ಪ್ರತಿಷ್ಠಿತ ವಾಚ್ ತಯಾರಿಕಾ ಕಂಪನಿಯಾಗಿರುವ ಟೈಟಾನ್‌ನ ಎಕ್ಸ್‌ಕ್ಲೂಸಿವ್ ಶೋರೂಂ`ಟೈಟಾನ್ ವರ್ಲ್ಡ್ʼ ಇದೀಗ ಪುತ್ತೂರಿನ ಬೊಳುವಾರಿನಲ್ಲಿ ಜನತೆಯ ಸೇವೆಗೆ ತೆರೆದುಕೊಂಡಿದೆ.
ಧಾರ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ಪ್ರಾರಂಭಗೊಂಡಿರುವ ಮಳಿಗೆಯನ್ನು ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ದೀಪ ಬೆಳಗಿಸಿ ಉದ್ಘಾಸಿದರು.
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ, ಏಸ್ ಮೊಬೈಕ್ಸ್‌ನ ಆಕಾಶ್ ಐತಾಳ್, ನಾಗಶ್ರೀ ಐತಾಳ್, ತಮನ್ವಿ ಸಿಲ್ಕ್‌ನ ವಿಜೇತ್, ಆರ್ಕಿಟೆಕ್ಟ್ ಮಯ್ಯೂರ್ ಜಾದವ್, ನಿಪ್ಪಾನ್ ಪೈಂಟ್ಸ್‌ನ ಪದ್ಮನಾಭ, ಟೈಟಾನ್ ಕಂಪನಿಯ ಏರಿಯಾ ಮ್ಯಾನೇಜರ್ ಸಂದೇಶ್ ಪೈ, ಜಿ.ಕೆ ಆಟೋಮೊಬೈಲ್ಸ್‌ನ ಕೇಶವ್, ರಾಮನಾಥ್ ಮಾರ್ಕೆಟಿಂಗ್‌ನ ಪ್ರದೀಪ್, ರಿತೇಶ್, ರಾಜೇಶ್, ಸಂಸ್ಥೆಯ ಮ್ಹಾಲಕ ಪ್ರಸನ್ನ ಕೆ.ಆರ್., ಪತ್ನಿ ಗೀತಾ ಪ್ರಸನ್ನ, ಸಹೋದರ ಪ್ರವೀಣ್ ಕೆ.ಆರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಟೈಟಾನ್, ಫಾಸ್ಟ್‌ಟ್ರಾಕ್, ಸೊನಾಟ ಮೂರು ಬ್ರಾ,ಂಡ್‌ನ ವಾಚ್‌ಗಳು ಲಭ್ಯವಿದೆ. ಮಕ್ಕಳ ಝೂಪ್ ವಾಚ್‌ಗಳು, ಮಹಿಳೆಯರ ರಾಗಾ, ಪರ್ಪಲ್ ವಾಚ್‌ಗಳು, ಪುರುಷರ ಒಕ್ಟೇನ್, ರಿಗಾಲಿಯೊ, ದಂಪತಿಗಳಿಗೆ ಸಂಬಂಧಿಸಿದ ಬಂಧನ್ ಪ್ಯಾರ್‌ವಾಚ್‌ಗಳು, ಜಗತ್ತಿನ ಅತೀ ಸ್ಲಿಮ್‌ಸ್ಟ್ ವಾಚ್ ಆಗಿರುವ ಟೈಟಾನ್ ಎಡ್ಜ್ ವಾಚ್‌ಗಳ ಸೇಲ್ಸ್ ಮತ್ತು ಸವೀಸ್ ದೊರೆಯಲಿದೆ. ಮಳಿಗೆಯಲ್ಲಿ ಕನಿಷ್ಠ ಬೆಲೆ ರೂ.795ರಿಂದ ಪ್ರಾರಂಭಿಸಿ ಗರಿಷ್ಠ 49,990ರ ಬೆಲೆಯ ವಿವಿಧ ಮಾದರಿಯ ವಾಚ್‌ಗಳು ಲಭ್ಯವಿದೆ. ಅಲ್ಲದೆ ಬ್ರಾಂಡೆಡ್ ಸ್ಕಿನ್ ಫರ್ಪ್ಯೂಮ್ ಲಭ್ಯವಿದೆ ಎಂದು ಮ್ಹಾಲಕ ಪ್ರಸನ್ನ ಕೆ.ಆರ್ ತಿಳಿಸಿದ್ದಾರೆ.