ಪುತ್ತೂರು: ಭಾರತದಲ್ಲಿ ಈಗ ಇಲೆಕ್ಟ್ರಿಕ್ ವಾಹನಗಳ ಯುಗ. ಈ ಕ್ಷೇತ್ರದಲ್ಲಿ ನಿತ್ಯ ನಿರಂತರ ಸಂಶೋಧನೆಗಳು ನಡೆಯುತ್ತಿದ್ದು, ಗ್ರಾಹಕರ ಬೇಡಿಕೆ, ಅವಶ್ಯಕತೆಗೆ ಪೂರಕವಾದ ವಾಹನಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಈ ಪೈಕಿ ಇದೀಗ ಭಾರತದ ಇಲೆಕ್ಟ್ರಿಕ್ ಸ್ಕೂಟರ್ಗಳ ಇತಿಹಾಸದಲ್ಲೇ ಅತ್ಯಧಿಕ ರೇಂಜ್ ಅಂದರೆ ಫುಲ್ಚಾರ್ಜ್ಗೆ 248 ಕಿ.ಮೀ.ಗಳವರೆಗೆ ಸಾಗಬಲ್ಲ ಸ್ಕೂಟರ್ ಇದೀಗ ಪುತ್ತೂರಿಗೂ ಬಂದಿದೆ.
ಭಾರತೀಯ ಇಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಸಿಂಪಲ್ ಎನರ್ಜಿ ಸಂಸ್ಥೆಯ ಸ್ಕೂಟರ್ನ್ನು ಗ್ರಾಹಕರು ಇನ್ನು ಮುಂದೆ ಪುತ್ತೂರಿನಲ್ಲೇ ಖರೀದಿಸಬಹುದು. ವಿತರಕರಾದ ಈಶ್ ಉದ್ಯೋಗ್ ಪ್ರೈವೇಟ್ ಲಿಮಿಟೆಡ್ನ ಸಿಂಪಲ್ ಎನರ್ಜಿ ಪುತ್ತೂರು ಶೋರೂಂ ಎಪಿಎಂಸಿ ರಸ್ತೆಯಲ್ಲಿರುವ ತ್ರಿನೇತ್ರ ಕಾಂಪ್ಲೆಕ್ಸ್ೞನಲ್ಲಿ ಜೂ.16ರಂದು ಸಂಜೆ 4.30ಕ್ಕೆ ಶುಭಾರಂಭಗೊಳ್ಳಲಿದೆ.
ಸಿಂಪಲ್ ವನ್ ಮತ್ತು ಸಿಂಪಲ್ 1ಎಸ್ ಎನ್ನುವ ಎರಡು ಮಾದರಿಯ ವಾಹನಗಳನ್ನು ಸಂಸ್ಥೆಯು ಪರಿಚಯಿಸಿದ್ದು, ಸಿಂಪಲ್ ವನ್ ಮಾದರಿಯ ಸ್ಕೂಟರ್ 248 ಕಿಮೀ ಐಡಿಸಿ ರೇಂಜ್ ಹೊಂದಿದೆ. ವಾಹನದ ಮೋಟಾರ್ ಮತ್ತು ಬ್ಯಾಟರಿ ಮೇಲೆ 8 ವರ್ಷಗಳ ವ್ಯಾರಂಟಿಯನ್ನು ಕೂಡ ನೀಡಲಾಗುತ್ತಿದೆ. 2.77 ಸೆಕೆಂಡ್ಗಳಲ್ಲಿ 0-40 ಕಿಮೀವರೆಗಿನ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯವಿದೆ.
ರೈಡಿಂಗ್ನಲ್ಲಿ ಇಕೋ, ರೈಡ್, ಡ್ಯಾಶ್, ಸೋನಿಕ್ ಎನ್ನುವ ನಾಲ್ಕು ಮೋಡ್ಗಳಿದ್ದು, ಗಂಟೆಗೆ 105 ಕಿ.ಮೀ. ಗರಿಷ್ಠ ವೇಗದಲ್ಲಿ ಸಂಚರಿಸಬಹುದು. ಇಕೋ ಮೋಡ್ನಲ್ಲಿ ಕೂಡ ಗಂಟೆಗೆ 56 ಕಿಮೀ ವೇಗದಲ್ಲಿ ಸಾಗುತ್ತದೆ. ಜೊತೆಗೆ ಆಕರ್ಷಕ ಡಿಸ್ಪ್ಲೇ ಹೊಂದಿದ್ದು, ಕಾಲ್, ಮ್ಯೂಸಿಕ್, ಫೋನ್ ನೋಟಿಫಿಕೇಷನ್ಸ್, ರ್ಯಾಪಿಡ್ ಬ್ರೇಕ್ ಅಲರ್ಟ್, ಡ್ರಾಪ್ ಸೇಫ್ ಮತ್ತು ಟಿಪಿಎಂಎಸ್ನ್ನು ಕೂಡ ಒಳಗೊಂಡಿದೆ. ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಸಿಂಪಲ್ ವನ್ನ ಮಾರುಕಟ್ಟೆ ಬೆಲೆ 1,59,999/- ರೂ.ಗಳು.
ಸಿಂಪಲ್ 1ಎಸ್ ಎನ್ನುವುದು ಇನ್ನೊಂದು ಮಾದರಿಯ ಸ್ಕೂಟರ್ ಆಗಿದ್ದು, ಇದರ ರೇಂಜ್ 180 ಕಿ.ಮೀಗಳು. ವಾಹನದ ಮೋಟಾರ್ ಮತ್ತು ಬ್ಯಾಟರಿ ಮೇಲೆ 8 ವರ್ಷಗಳ ವ್ಯಾರಂಟಿಯನ್ನು ಕೂಡ ನೀಡಲಾಗುತ್ತಿದೆ. ಈ ಸ್ಕೂಟರ್ನ ಬೆಲೆ 1,39,999/ ರೂ.ಗಳು. ಎರಡೂ ವಾಹನಗಳ ನಿರ್ವಹಣಾ ವೆಚ್ಚವು ಬಹಳ ಕಡಿಮೆಯಿದ್ದು, 5000 ಕಿ.ಮೀಗಳು ಅಥವಾ 60 ದಿನಗಳು ಇವೆರಡರ ನಡುವೆ ಸರ್ವೀಸ್ ಮಾಡಿಸಿಕೊಂಡರೆ ಸಾಕು.
ಈ ಇಲೆಕ್ಟ್ರಿಕ್ ವಾಹನಗಳನ್ನು ಖರೀದಿಸ ಬಯಸುವವರಿಗೆ ಸಂಸ್ಥೆಯು ವಿಶೇಷ ಅವಕಾಶಗಳನ್ನು ಕೂಡ ಒದಗಿಸಿದೆ. 6.99%, 7.99% ದರದಲ್ಲಿ ಸಾಲ ಸೌಲಭ್ಯವೂ ಲಭ್ಯವಿದೆ. ಕೇವಲ 15,000/- ರೂ.ಗಳ ಕಡಿಮೆ ಡೌನ್ಪೇಮೆಂಟ್ನಲ್ಲಿ ವಾಹನವನ್ನು ತಮ್ಮದಾಗಿಸಿಕೊಳ್ಳಬಹುದು.
ಅಲ್ಲದೆ, ತಮ್ಮ ಯಾವುದೇ ದ್ವಿಚಕ್ರ ವಾಹನವನ್ನು ಸಿಂಪಲ್ ವನ್ನೊಂದಿಗೆ ಎಕ್ಸ್ಚೇಂಜ್ ಕೂಡ ಮಾಡಿಕೊಳ್ಳಬಹುದು. ಟೆಸ್ಟ್ರೈಡ್ಗೆ ಅಥವಾ ಹೆಚ್ಚಿನ ಮಾಹಿತಿಗೆ 9606590399ಗೆ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.