ಪುತ್ತೂರು ಟ್ರಾಫಿಕ್ ಠಾಣೆಯ ಹೆಡ್‌ಕಾನ್ಸ್ಟೇಬಲ್, ಗೂನಡ್ಕದ ಶಿವಪ್ರಸಾದ್ ನಿಧನ

0

ಪುತ್ತೂರು: ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಠೇಬಲ್ ಶಿವಪ್ರಸಾದ್ (53ವ) ಅವರು ಜೂ.15 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸುಳ್ಯ ಸಂಪಾಜೆ ಗೂನಡ್ಕ ನಿವಾಸಿಯಾಗಿದ್ದ ಶಿವಪ್ರಸಾದ್ ಅವರು ಕಳೆದ ಮೂರು ವರ್ಷಗಳಿಂದ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ‌ ಕರ್ತವ್ಯ ನಿರ್ವಹಿಸುತ್ತಿದ್ದರು. ಜೂ.14ರ ರಾತ್ರಿ ಮನೆಯಲ್ಲಿ ಮಲಗಿದ್ದವರು ಜೂ.15 ರಂದು ಅವರು ಬೆಳಗ್ಗೆ ಎದ್ದೇಲಿಲ್ಲ ಎಂದು ಅವರ ಪತ್ನಿ ನೋಡಿದಾಗ ಶಿವಪ್ರಸಾದ್ ನಿಧನರಾಗಿರುವುದು ಬೆಳಕಿಗೆ ಬಂದಿದೆ.

ಮೃತರು ಪತ್ನಿ, ಮೂವರು ಮಕ್ಕಳು, ತಂದೆ ತಾಯಿ ಯನ್ನು ಅಗಲಿದ್ದಾರೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್ ಐ ಉದಯರವಿ ಅವರು ಮೃತರ ಮನೆಗೆ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here