ಕೊಡಿಪ್ಪಾಡಿ : ಚಲಿಸುತ್ತಿದ್ದ ಕಾರಿಗೆ ಬೆಂಕಿ !

0

ಪುತ್ತೂರು: ಚಲಿಸುತ್ತಿದ್ದ ಕಾರೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಕೊಂಡ ಘಟನೆ ಕೊಡಿಪ್ಪಾಡಿ ರಸ್ತೆಯಲ್ಲಿ ಜೂ.15 ರ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.

ಅಳಕೆಮಜಲು ಪಂಬತಮಜಲು ಇಮ್ತಿಹಾಜ್ ಅವರ ಮಾರುತಿ ರಿಡ್ಜ್  ಕಾರು ( Ka 19 mc 6210) ಕೊಡಿಪ್ಪಾಡಿ ರಸ್ತೆಯಾಗಿ ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರಿನಲ್ಲಿದ್ದವರು ಹೊರಗೆ ಬಂದು ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಸ್ಥಳೀಯರು ಕೂಡಾ ಬಂದು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು.‌ ಇದೇ ಅಗ್ನಿಶಾಮಕ ದಳದವರೂ ಆಗಮಿಸಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರೂ ಕಾರು ಪೂರ್ಣ ಬೆಂಕಿಗೆ ಆಹುತಿಯಾಗಿದೆ. 

LEAVE A REPLY

Please enter your comment!
Please enter your name here