ವಿಟ್ಲ: ಇಲ್ಲಿನ ಪಂಚಲಿಂಗೇಶ್ವರ ಗ್ಯಾರೇಜ್ ಮಾಲಕ ರಾಮಣ್ಣ ಪೂಜಾರಿ (70 ವ.)ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ರಾಮಣ್ಣ ಪೂಜಾರಿ ವಿಟ್ಲ ಬೊಬ್ಬೆಕೇರಿ ನಿವಾಸಿಯಾಗಿದ್ದು, ಪ್ರಸ್ತುತ ಕಡೇಶಿವಾಲಯದಲ್ಲಿ ವಾಸವಾಗಿದ್ದಾರೆ. ಇವರು ವಿಟ್ಲದಲ್ಲಿ ಹಲವಾರು ವರ್ಷಗಳ ಕಾಲ ಬಸ್ಸು ಹಾಗೂ ಲಾರಿಯ ಗ್ಯಾರೇಜನ್ನು ನಡೆಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.