ಇಂಡಿಯನ್ ಟ್ಯಾಲೆಂಟ್ ಒಲಂಪಿಯಾಡ್ ಪರೀಕ್ಷೆ: ಪ್ರಿಯದರ್ಶಿನಿಯ ಏಳು ವಿದ್ಯಾರ್ಥಿಗಳಿಗೆ ರ್‍ಯಾಂಕ್, ಗೋಲ್ಡನ್ ಸ್ಕೂಲ್, ಬೆಸ್ಟ್ ಪ್ರಿನ್ಸಿಪಲ್ ಅವಾರ್ಡ್ 

0

ಬೆಟ್ಟಂಪಾಡಿ: ಇಂಡಿಯನ್ ಟ್ಯಾಲೆಂಟ್ ಒಲಿಂಪಿಯಾಡ್ ನಡೆಸಲ್ಪಡುವ ಮೊದಲ ಸುತ್ತಿನ ಪರೀಕ್ಷೆಯಲ್ಲಿ ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾ ಸಂಸ್ಥೆಯ 170 ವಿದ್ಯಾರ್ಥಿಗಳು ಹಾಜರಾಗಿದ್ದು ಎರಡನೆಯ ಸುತ್ತಿಗೆ 100 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. 

ಎರಡನೇ ಸುತ್ತಿನ ಪರೀಕ್ಷೆಯಲ್ಲಿ ಏಳು ವಿದ್ಯಾರ್ಥಿಗಳು ವಿಶೇಷ ಸಾಧನೆಯನ್ನು ಮಾಡಿ ಶಾಲೆಗೆ ಹೆಸರು ತಂದಿರುತ್ತಾರೆ. ಎರಡನೇ ಸುತ್ತಿನ ಇಂಡಿಯನ್ ಟ್ಯಾಲೆಂಟ್ ಒಲಿಂಪಿಯಾಡ್ ಪರೀಕ್ಷಾ ಫಲಿತಾಂಶದಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ಶಾರ್ವಿ ಎಸ್ ರೈ (ಸದಾನಂದ ರೈ ಮತ್ತು ಸೌಮ್ಯ ರೈ ಚೆಲ್ಯಡ್ಕ ದಂಪತಿ ಪುತ್ರಿ) ರಾಜ್ಯಮಟ್ಟದ ಇಂಗ್ಲಿಷ್ ವಿಷಯದಲ್ಲಿ ನಾಲ್ಕನೇ ರ್‍ಯಾಂಕ್ ಹಾಗೂ ಎರಡನೇ ತರಗತಿ ವಿದ್ಯಾರ್ಥಿನಿ ಆಧ್ಯಾ ಘಾಟೆ (ಆದಿತ್ಯ ಘಾಟೆ ಮತ್ತು ಪ್ರಸನ್ನ ಕುಮಾರಿ ದಂಪತಿ ಪುತ್ರ) ಇಂಗ್ಲಿಷ್ ವಿಷಯದಲ್ಲಿ 5ನೇ ರ್‍ಯಾಂಕ್ ಪಡೆದು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುತ್ತಾರೆ.

ಮೂರನೇ ತರಗತಿ ವಿದ್ಯಾರ್ಥಿನಿ ಸಾಯಿಶ್ರೀಯಾಲಿ (ಪಾಣಾಜೆ ಗ್ರಾ.ಪಂ. ಸದಸ್ಯ ಸುಭಾಸ್ ರೈ ಮತ್ತು ಶರ್ಮಿಳಾ ರೈ ದಂಪತಿ ಪುತ್ರಿ) ರಾಜ್ಯಮಟ್ಟದ ವಿಜ್ಞಾನ ವಿಷಯದಲ್ಲಿ 20ನೇ ರ್‍ಯಾಂಕ್ ನೊಂದಿಗೆ ಎಕ್ಸಲೆನ್ಸ್ ಅವಾರ್ಡ್ ಪಡೆದುಕೊಂಡಿರುತ್ತಾರೆ.  3 ನೇ ತರಗತಿಯ ಈಶಾನ ಬಿ. (ಕಾನುಮೂಲೆ ವೆಂಕಟ್ರಮಣ ಭಟ್ ಮತ್ತು ಶ್ರೀದೇವಿ ದಂಪತಿ ಪುತ್ರ) ರಾಜ್ಯಮಟ್ಟದ ಗಣಿತ ವಿಷಯದಲ್ಲಿ 23ನೇ ರ್‍ಯಾಂಕ್ ಪಡೆದು ಮೆಡಲ್ ನೊಂದಿಗೆ ಎಕ್ಸಲೆನ್ಸ್ ಅವಾರ್ಡ್ ಪಡೆದುಕೊಂಡಿರುತ್ತಾರೆ. ಐದನೇ ತರಗತಿ ವಿದ್ಯಾರ್ಥಿನಿ ಆಪ್ತಿ ಎಸ್. ರೈ (ಪ್ರಕಾಶ್ ರೈ ಎಸ್. ಅಶ್ವಿತಾ ಎಸ್. ರೈ ದಂಪತಿ ಪುತ್ರಿ) ಗಣಿತ ವಿಷಯದಲ್ಲಿ ರಾಜ್ಯಮಟ್ಟದ ಮೆಡಲ್ ನೊಂದಿಗೆ ಎಕ್ಸಲೆಂಟ್ ಮೆಡಲ್ ಪಡೆದುಕೊಂಡಿರುತ್ತಾರೆ ಹಾಗೂ ಐದನೇ ತರಗತಿಯ ಪ್ರಣತಿ ಬಿ. (ಬೆಟ್ಟಂಪಾಡಿ ದೇವಾಲಯದ ಆಡಳಿತ ಮೊಕ್ತೇಸರ ವಿನೋದ್ ಬಲ್ಲಾಳ್ ಮತ್ತು ದಿವ್ಯ ಬಿ. ರವರ ಪುತ್ರಿ) ಇವರು ರಾಜ್ಯಮಟ್ಟದ ಗಣಿತ ವಿಷಯದಲ್ಲಿ ಮೆಡಲ್ ಪಡೆದು ಎಕ್ಸಲೆನ್ಸ್ ಅವಾರ್ಡ್ ಪಡೆದಿರುತ್ತಾರೆ ಹಾಗೂ ಎಂಟನೇ ತರಗತಿ ವಿದ್ಯಾರ್ಥಿ ಭುವನ್ ರೈ (ನವೀನ್ ರೈ ಬದಿನಾರು ಮತ್ತು ಶುಭಪ್ರಿಯ ದಂಪತಿ ಪುತ್ರ) ರಾಜ್ಯಮಟ್ಟದ ವಿಜ್ಞಾನ ವಿಷಯದಲ್ಲಿ 22ನೇ ರ್‍ಯಾಂಕ್ ಪಡೆದು ಮೆಡಲ್ ನೊಂದಿಗೆ ಎಕ್ಸಲೆನ್ಸ್ ಅವಾರ್ಡ್ ಪಡೆದಿರುತ್ತಾರೆ.

ಇಂತಹ ವಿಶೇಷ ಸಾಧನೆ ಮಾಡಿದ ಗ್ರಾಮೀಣ ವಿದ್ಯಾಸಂಸ್ಥೆಗೆ ಇಂಡಿಯನ್ ಟ್ಯಾಲೆಂಟ್ ಒಲಂಪಿಯಾಡ್ ಗೋಲ್ಡನ್ ಸ್ಕೂಲ್ ಎಂಬ ಬಿರುದನ್ನು ನೀಡಿ ಗೌರವಿಸಿದೆ. ಈ ಸಾಧನೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಶ್ ನೆಲ್ಲಿತಡ್ಕ ಇವರಿಗೆ ಬೆಸ್ಟ್ ಪ್ರಿನ್ಸಿಪಾಲ್ ಅವಾರ್ಡ ನ್ನು ಇಂಡಿಯನ್ ಟ್ಯಾಲೆಂಟ್ ನೀಡಿ ಗೌರವಿಸಿದೆ.

LEAVE A REPLY

Please enter your comment!
Please enter your name here