ಪುತ್ತೂರು: ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಚರ್ಚ್ ಬಿಲ್ಡಿಂಗ್‌ನಲ್ಲಿ ಎಸ್‌ಎಂ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆ ಜೂ.16ರಂದು ಶುಭಾರಂಭಗೊಂಡಿತು. ಹಂಝ ಮದನಿ ಮಿತ್ತೂರು ಮಳಿಗೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿ ಚಾರ್ಟೆರ್ಡ್ ಎಕೌಂಟೆಂಟ್ ಕೃಷ್ಣ ಎಂ, ಪುತ್ತೂರು ಮ್ಯಾದೆದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಲಾರೆನ್ಸ್ ಮಸ್ಕರೆನ್ದಸ್, ಚರ್ಚ್ ಉಪಾಧ್ಯಕ್ಷ ಜೆರಾಲ್ಡ್ ಡಿ’ಕ್ರಾಸ್ತ ಮತ್ತಿತರರು ಆಗಮಿಸಿ ಶುಭಹಾರೈಸಿದರು. ಎಸ್‌ಎಂ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶುಭಾರಂಭದ ಪ್ರಯುಕ್ತ ಪ್ರತಿ ಗಂಟೆಗೆ ಕೂಪನ್ ಡ್ರಾ ನಡೆಸಲಾಯಿತು. ವಿಜೇತರಿಗೆ ವಿಶೇಷ ಉಡುಗೊರೆ ನೀಡಲಾಯಿತು. ಅಲ್ಲದೆ, ಖರೀದಿಯ ಮೇಲೆ ಕಡಿಮೆ ಮೇಕಿಂಗ್ ಶುಲ್ಕಗಳು, 8 ಗ್ರಾಂ ಗಿಂತ ಹೆಚ್ಚಿನ ಖರೀದಿಯ ಮೇಲೆ ಉಚಿತ ನಾಣ್ಯ, ಪ್ರತಿ ಖರೀದಿಗೆ ವಿಶೇಷ ಉಡುಗೊರೆಗಳನ್ನು ನೀಡಲಾಗುತ್ತದೆ. ಅಲ್ಲದೆ, ಕೂಪನ್ ಡ್ರಾದಲ್ಲಿ ಬಂಪರ್ ಬಹುಮಾನವಾಗಿ ಆ್ಯಕ್ಟಿವಾ, 2ನೇ ಬಹುಮಾನವಾಗಿ ಗೋಲ್ಡ್ ಕಾಯಿನ್, ಟಿಲ್ಡಿಂಗ್ ಡ್ರೈಂಡರ್ ಹಾಗೂ 10 ಲಕ್ಕಿ ಸದಸ್ಯರಿಗೆ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವಿದ್ದು, ಮದುವೆ ಪಾರ್ಟಿಗೆ ಮೇಕಿಂಗ್ ಚಾರ್ಜ್ ಮೇಲೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 8722527505 ಸಂಪರ್ಕಿಸಬಹುದು ಎಂದು ಮಾಲಕ ಇಸ್ಮಾಯಿಲ್ ಅರಫಾತ್ ತಿಳಿಸಿದ್ದಾರೆ.
