ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿ ಮಂಡಲದ ಚುನಾವಣೆ

0

ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕ ಹಾಗೂ ಉಪನಾಯಕನ ಹುದ್ದೆಗೆ ಚುನಾವಣೆ ನಡೆಯಿತು.


ಈ ಚುನಾವಣೆಯಲ್ಲಿ ಏಳು ಮಂದಿ ವಿದ್ಯಾರ್ಥಿಗಳು ನಾಯಕನ ಸ್ಥಾನಕ್ಕೆ ಹಾಗೂ ಆರು ಮಂದಿ ವಿದ್ಯಾರ್ಥಿಗಳು ಉಪನಾಯಕನ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯನಿಯಾದ ಲೋರ ಪಾಯಸರವರು ಚುನಾವಣೆಯ ಮಹತ್ವ ಹಾಗೂ ಉತ್ತಮ ನಾಯಕನ ಗುಣಲಕ್ಷಣಗಳ ಬಗ್ಗೆ ತಿಳಿಸಿದರು. ಸ್ಪರ್ಧಾಳುಗಳ ಮತಯಾಚನೆಯ ಪ್ರಕ್ರಿಯೆಯ ಬಳಿಕ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತು. ಈ ಚುನಾವಣೆಯಲ್ಲಿ ನಾಲ್ಕರಿಂದ ಏಳನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿ ನಾಯಕನಾಗಿ 7ನೇ ತರಗತಿಯ ಅಬ್ದುಲ್ ಮನಾಫು ಹಾಗೂ ಉಪ ನಾಯಕಿಯಾಗಿ 6ನೇ ತರಗತಿಯ ಲಿನ್ ಲೋಬೋ ರವರು ಆಯ್ಕೆಗೊಂಡರು. ಚುನಾವಣೆಯ ಕಾರ್ಯನಿರ್ವಹಣೆಯನ್ನು ಶಾಲಾ ಸಹ ಶಿಕ್ಷಕಿಯಾದ ಶ್ರೀಮತಿ ಮರಿಯಾ ಲೂಸಾ ರವರು ನಡೆಸಿಕೊಟ್ಟರು. ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here