ಉಪ್ಪಿನಂಗಡಿ:ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಇದರ ಶಾಲಾ ಮಂತ್ರಿಮಂಡಲ ರಚನೆ ನಡೆಯಿತು.
ಹತ್ತನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಸೂಫಿಯಾನ್ ನಾಯಕನಾಗಿ , ಒಂಬತ್ತನೇ ತರಗತಿಯ ಫಾತಿಮಾ ತನ್ವೀರಾ ಅವರು ನಾಯಕಿಯಾಗಿ ಆಯ್ಕೆಯಾದರು.
ಆರೋಗ್ಯ ಮಂತ್ರಿಯಾಗಿ ಮೊಹಮ್ಮದ್ ಬಾಈಶ್ ,ಕ್ರೀಡಾ ಮಂತ್ರಿಯಾಗಿ ಮೊಹಮ್ಮದ್ ಶಾಹಿಲ್ ,ಶಿಕ್ಷಣ ಮಂತ್ರಿಯಾಗಿ ಸುಜಾಸ್ ಅಲಿ, ಸಾಂಸ್ಕೃತಿಕ ಮಂತ್ರಿಯಾಗಿ ಆಶಿಕಾ ರೀದಾ
ಶಿಸ್ತು ಮಂತ್ರಿಯಾಗಿ ಐಶಾ ಮರ್ಜೀನ್ ಆಯ್ಕೆಯಾದರು.
ಚುನಾವಣೆಯು ಶಿಕ್ಷಕ ಹರೀಶ್, ಅನ್ನಪೂರ್ಣ ಮತ್ತು ಸೌಮ್ಯಾ ಅವರ ಮಾರ್ಗದರ್ಶನದಲ್ಲಿ, ಮೊಬೈಲ್ ಆಧಾರಿತ EVM ಉಪಕರಣದ ಮೂಲಕ ನಡೆಯಿತು.
ಶಾಲಾ ಪ್ರಾಂಶುಪಾಲೆ ಶಂಶಾದ್ ಬೇಗಂ ನೂತನವಾಗಿ ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಶಾಲೆಯ ಶಿಕ್ಷಕರು ಸಹಕರಿಸಿದರು.