ಪುತ್ತೂರು: ಕೈಕಾರದಲ್ಲಿರುವ ಒಳಮೊಗ್ರು ಗ್ರಾಮ ಪಂಚಾಯತ್ನ ಸ್ವಚ್ಛ ಸಂಕೀರ್ಣ ಘಟಕಕ್ಕೆ ಶುದ್ಧ ಕುಡಿಯುವ ನೀರಿನ ಉಪಕರಣವನ್ನು ಮುಗೇರು ನಿವಾಸಿಗಳಾದ ಡಾ| ಸತ್ಯವತಿ ಆಳ್ವ ಮತ್ತು ಡಾ| ಶರಣ್ ಆಳ್ವರವರು ಕೊಡುಗೆಯಾಗಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್.ರವರು ಕೊಡುಗೆಯನ್ನು ಸ್ವೀಕರಿಸಿ ಧನ್ಯವಾದ ಅರ್ಪಿಸಿದರು.
