ಪುತ್ತೂರು: ಪುತ್ತೂರಿನಲ್ಲಿ 2024-25 ನೇ ಸಾಲಿನಲ್ಲಿ ಮಾಡಿರುವ ಹಲವಾರು ಜನಪರ ಸೇವೆಗಳಿಗಾಗಿ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181 ಇದರ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರ ನೇತೃತ್ವದ ಸಮಿತಿಯಿಂದ ಮಂಗಳೂರಿನ ಪಿಲಿಕುಳ ಸ್ಕೌಟ್ ಹಾಗೂ ಗೈಡ್ಸ್ ಸಭಾಭವನದಲ್ಲಿ ಜೂ.21 ರಂದು ನಡೆದ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಉಪ್ಪಿನಂಗಡಿಗೆ ಪ್ರತಿಷ್ಠಿತ ಪ್ಲಾಟಿನಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ನವೀನ್ ಬ್ರ್ಯಾಗ್ಸ್,, ನಿಯೋಜಿತ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ಕಾರ್ಯದರ್ಶಿ ಕೇಶವ ಪಿ.ಎಮ್, ನಿಯೋಜಿತ ಕಾರ್ಯದರ್ಶಿ ಶ್ರೀಕಾಂತ್ ಪಟೇಲ್, ನಿಯೋಜಿತ ಸಹಾಯಕ ಗವರ್ನರ್ ಡಾ. ರಾಜಾರಾಮ್ ಕೆ.ಬಿ, ಇಸ್ಮಾಯಿಲ್ ಇಕ್ಬಾಲ್, ಆಶಾಲತಾ ನಾಯಕ್ ಉಪಸ್ಥಿತರಿದ್ದರು.