ಪುತ್ತೂರು: ಬೊಳುವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ, ರೋಟರಿ ಕ್ಲಬ್ ಪುತ್ತೂರು, ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಇವುಗಳ ಸಹಯೋಗದೊಂದಿಗೆ ಮಾಸಿಕ ವೈದ್ಯಕೀಯ ಶಿಬಿರವು ಜು.1ರಂದು ನಡೆಯಿತು.
ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರೋಟರಿ ಕ್ಲಬ್ ಪುತ್ತೂರು ಇದರ ನೂತನ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಮಾತನಾಡಿ, ವಿವಿಧ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರುವ ಪ್ರಗತಿ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ. ಅದಕ್ಕೆ ಈಗ ಮೇಮೋಗ್ರಫಿ ಸೆಂಟರ್ ಸೇರ್ಪಡೆಯಾಗಿದೆ. ರೋಟರಿ ಕ್ಲಬ್ ಮುಖಾಂತರ ಜನರ ಬದುಕಿಗೆ ಉಪಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಶ್ರೀಪತಿ ರಾವ್ ಮಾತನಾಡಿ, ರೋಟರಿ ಕ್ಲಬ್ ಮುಖಾಂತರ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಖಾಯಿಲೆ ಪತ್ತೆ ಮಾಡುವ ಮ್ಯಾಮೊಗ್ರಫಿಯನ್ನು ಪ್ರಾರಂಭಿಸಲಾಗುತ್ತಿದ್ದು ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಸೇವೆ ನೀಡಲಾಗುವುದು. ಪ್ರತಿ ತಿಂಗಳ 1ನೇ ತಾರೀಕಿನಂದು ನಡೆಯುವ ಮಾಸಿಕ ಶಿಬಿರದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ತಪಾಸಣೆ ನಡೆಯಲಿದ್ದು ಬಡವರಿಗೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ನಿಂದ ಪ್ರಗತಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಶ್ರೀಪತಿ ರಾವ್ ಹಾಗೂ ಸುಧಾ ಎಸ್. ರಾವ್ ದಂಪತಿಯನ್ನು ಗೌರವಿಸಲಾಯಿತು.
ರೋಟರಿ ಕ್ಲಬ್ ಕಾರ್ಯದರ್ಶಿ ಸುಬ್ಬಪ್ಪ ಕೈಕಂಬ, ಮಾಜಿ ಅಧ್ಯಕ್ಷರಾದ ಜೈರಾಜ್ ಭಂಡಾರಿ ಕ್ಸೇವಿಯರ್ ಡಿ ಸೋಜ, ಸತೀಶ್ ನಾಯಕ್, ಹೆರಾಲ್ಡ್ ಮಾಡ್ತಾ, ರೋಟರಾಕ್ಟ್ ಕ್ಲಬ್ ಪ್ರಗತಿ ಆಸ್ಪತ್ರೆಯ ಅಧ್ಯಕ್ಷ ರಂಜಿತ್ ಹಾಗೂ ಪ್ರಗತಿ ಆಸ್ಪತ್ರೆಯ ವೈದ್ಯರುಗಳು, ವಿವಿಧ ಔಷಧಿ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ಡಾ.ಶ್ರೀಪತಿ ರಾವ್ ಸ್ವಾಗತಿಸಿದರು. ಪ್ರಗತಿ ಪ್ಯಾರಮೆಡಿಕಲ್ ಕಾಲೇಜಿನ ಪ್ರೀತಾ ವಂದಿಸಿದರು.
ಶಿಬಿರದಲ್ಲಿ ರಕ್ತದೊತ್ತಡ ಪರೀಕ್ಷೆ, ಮಧುಮೇಹ, ಥೈರೋಯಿಡ್ ಪರೀಕ್ಷೆ, ಮಕ್ಕಳ ತಪಾಸಣೆ, ಲಿವರ್ ತಪಾಸಣೆಗಾಗಿ ಫೈಬ್ರೋ ಸ್ಕ್ಯಾನ್, ಇಸಿಜಿ., ಅಸ್ತಮಾ, ಸ್ಪೈರೋಮೆಟ್ರಿಕ್ ಪರೀಕ್ಷೆ, ಪ್ರಾಸ್ಟೇಟ್ ಗ್ರಂಥೀಯ ಪರೀಕ್ಷೆ, ಮೂಳೆ ಸಾಂದ್ರತೆ, ಕೊಬ್ಬಿನಾಂಶ ತಪಾಸಣೆಗಾಗಿ ಲಿಪಿಡ್ ಪ್ರೊಪೈಲ್ ಪರೀಕ್ಷೆ.ಸ್ತನ ಕಾಯಿಲೆ ಹಾಗೂ ನರಸೂಕ್ಷ್ಮತೆ ಪರೀಕ್ಷೆಗಳನ್ನು ನಡೆಸಲಾಯಿತು. ನೂರಾರು ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.