ಸಾಮೆತ್ತಡ್ಕ:ಅನೈತಿಕ ಚಟುವಟಿಕೆ ದೂರು : ಮನೆಗೆ ಪೊಲೀಸ್ ದಾಳಿ- ಮನೆ ಮಾಲಕ ಸಹಿತ ಇಬ್ಬರ ವಿರುದ್ಧ ಪ್ರಕರಣ

0

ಪುತ್ತೂರು: ಸಾಮೆತ್ತಡ್ಕದ ಮನೆಯೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಮಾಹಿತಿ ಆಧರಿಸಿ ದಿಢೀರ್ ದಾಳಿ ನಡೆಸಿದ ಪೊಲೀಸರು ಯುವತಿಯನ್ನು ರಕ್ಷಿಸಿ, ಇಬ್ಬರು ಪುರುಷರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಪೊಲೀಸರ ದಾಳಿ ವೇಳೆ ಮನೆ ಮಾಲಕ, ಯುವತಿ ಮತ್ತು ಪುರುಷನನ್ನು ಅಲ್ಲಿಂದ ತಪ್ಪಿಸಲು ಸಹಾಯ ಮಾಡಿದ್ದಾರೆ. ಆದರೆ ಬೆನ್ನತ್ತಿದ್ದ ಪೊಲೀಸರು ಯುವತಿಯನ್ನು ರಕ್ಷಿಸಿದ್ದಾರೆ.ಸುಳ್ಯ ಮೂಲದ ಪುರುಷ ಮತ್ತು ಅವರಿಗೆ ಮನೆ ನೀಡಿದ ವಿಲ್ಪ್ರೆಡ್ ಎಂಬವರನ್ನು ವಶಕ್ಕೆ ಪಡೆದು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here