ಪುತ್ತೂರು:ಜೂ.2ರಂದು ನಿಧನರಾದ ನಿವೃತ್ತ ಶಿಕ್ಷಕ ಪರಿವಾರಬಂಟರ ಸಂಘದ ಪುತ್ತೂರು ವಲಯದ ಉಪಾಧ್ಯಕ್ಷ ನಂದಿಲ ಶಿವಾನಂದ ನಾೖಕ್ ಅವರ ಉತ್ತರಕ್ರಿಯೆ ಮತ್ತು ಶ್ರದ್ದಾಂಜಲಿ
ಸಭೆಯಲ್ಲಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ`ವನದಲ್ಲಿ ಜು.1ರಂದು ನಡೆಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ರೈಲ್ವೇ ಅಧಿಕಾರಿ ಕುಂಟಿನಿ ಕೃಷ್ಣ ಶೆಟ್ಟಿ ಅವರು ಮಾತನಾಡಿ, ಹುಟ್ಟು ಸಾವುಗಳ ನಡುವಿನ ಬದುಕನ್ನು ಎಲ್ಲರ ಮನಸ್ಸಲ್ಲು ಚಿರಸ್ಥಾಯಿಯಾಗಿ ಉಳಿಯುವ ರೀತಿ ಸಜ್ಜನ ಬದುಕನ್ನು ಬಾಳಿ ಆದರ್ಶದ ಜೀವನವೆಂದರೇನು ಎಂಬುದನ್ನು ತೋರಿಸಿಕೊಟ್ಟವರು ಶಿವಾನಂದರು. ಅವರ ಮನೆಯವರಿಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಾಗವಂತನು ಕರುಣಿಸಲಿ ಪರಲೋಕದಲ್ಲಿ ಅವರ ಆತ್ಮ ಚಿರಶಾಂತಿಯಲ್ಲಿರಲಿ ಎಂದು ಹೇಳಿ ನುಡಿ ನಮನ ಸಲ್ಲಿಸಿದರು. ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ, ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಸಭೆಯಲ್ಲಿ ಸಹೋದರರಾದ ಉದಯ ಕುಮಾರ್ ನಾೖಕ್, ವಿಶ್ವನಾಥ ನಾೖಕ್ ಹಾರಾಡಿ, ರತನ್ ನಾೖಕ್, ಬಾಲಕೃಷ್ಣ ನಾೖಕ್, ರಾಜೇಶ್ ನಾೖಕ್ ನಂದಿಲ, ಭಾಸ್ಕರ ನಾೖಕ್, ವಿಶ್ವನಾಥ ನಾೖಕ್, ನಂದಿಲ, ಸುರೇಶ್ ನಾೖಕ್ , ಸುಚರಿತಾ ಬಾಲಕೃಷ್ಣ ನಾೖಕ್ , ಬಂಧು ಮಿತ್ರರು ಕುಟುಂಬಸ್ಥರು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಶಿವಾನಂದ ನಾೖಕ್ ರವರ ಪತ್ನಿ ಶೋಭಾ ಪುತ್ರ ಸಂದೀಪ್ ನಾೖಕ್, ಪುತ್ರಿ ಸಂಗೀತಾ, ಅಳಿಯ ವೈಶಾಖ್ ನಾೖಕ್ ಅತಿಥಿಗಳನ್ನು ಸತ್ಕರಿಸಿದರು.