ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ 8ನೇ ತರಗತಿ ಮಾಡುತ್ತಿರುವ ವಿದ್ಯಾರ್ಥಿನಿ ಅನ್ವಿತಾ ಎಸ್. ಇವರು 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಎರಡು ಸಾವಿರ ನಗದು ಬಹುಮಾನವನ್ನು ಪಡೆದುಕೊಂಡಿರುತ್ತಾರೆ.
ಇವರು ಕೊಂಬೆಟ್ಟು ನಿವಾಸಿಗಳಾದ ಶ್ರೀಕೃಷ್ಣ ಎಂ ಮತ್ತು ಶಂಕರಿ ಎಚ್. ದಂಪತಿ ಪುತ್ರಿ. 9ನೇ ತರಗತಿ ವಿದ್ಯಾರ್ಥಿನಿ ಸೋನಾ ಪೃಥ್ವಿ ಇವರು ರೂಪಾಯಿ 500 ನಗದು ಬಹುಮಾನದ ಜತೆಗೆ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಇವರು ಕಲ್ಲಾರೆ ನಿವಾಸಿಗಳಾದ ಡಾ.ಜಯಂತ್ ಕುಮಾರ್ ಹಾಗೂ ರೇಖಾ ಆರ್ ದಂಪತಿ ಪುತ್ರಿ.
