ಅಧ್ಯಕ್ಷರಾಗಿ ಗಿರೀಶ್ ಗೌಡ ಕನ್ನಯ, ಉಪಾಧ್ಯಕ್ಷರಾಗಿ ಸುಲೋಚನಾ ಎಸ್ ನಾಯ್ಕ ನೇರ್ಲಂಪಾಡಿ ಆಯ್ಕೆ
ಬಡಗನ್ನೂರು: ಬಡಗನ್ನೂರು ದ.ಕ.ಜಿ.ಪಂ.ಉ.ಹಿ.ಪ್ರಾ. ಶಾಲಾ ಶಾಲಾಭಿವೃದ್ಧಿ ಸಮಿತಿ ರಚನಾ ಸಭೆಯು ಜು.1ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರೂ ದಾನಿಗಳು ಆದ ನಾರಾಯಣ ರೖೆ ಕುದ್ಕಾಡಿ ಮಾತನಾಡಿ, ಶಾಲೆಗೆ ಒಂದು ಉತ್ತಮ ಸಭಾಂಗಣ ಆಗಬೇಕು ಅನ್ನುವ ಉದ್ದೇಶದಿಂದ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಎಸ್.ಡಿ.ಯಂ.ಸಿ ನೇತೃತ್ವದಲ್ಲಿ ದಾನಿಗಳ ಸಹಕಾರದಲ್ಲಿ ಉತ್ತಮ ಸಭಾಂಗಣ ನಿರ್ಮಾಣ ನಿರ್ಮಿಸಲಾಗಿದೆ. ಮುಂದೆ ಶಾಲಾಭಿವೃದ್ಧಿ ಅಧ್ಯಕ್ಷ ಹಾಗೂ ಸದಸ್ಯರಿಗೆ ಬಹಳಷ್ಟು ಜವಾಬ್ದಾರಿ ಇದೆ ಎಲ್ಲರೂ ಒಟ್ಟಾಗಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿದಾಗ ಶಾಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಾಧ್ಯ ಎಂದು ಹೇಳಿ ಶುಭ ಹಾರೖೆಸಿದರು.
ಬಡಗನ್ನೂರು ಗ್ರಾ.ಪಂ ಸದಸ್ಯ ಸಂತೋಷ ಅಳ್ವ ಗಿರಿಮನೆ ಮಾತನಾಡಿ, ಶಾಲಾಭಿವೃದ್ಧಿ ಸಮಿತಿ ಯಾವುದೇ ಗೊಂದಲ ಇಲ್ಲದೆ ಸಮಾನ ಮನಸ್ಸಿನಿಂದ ಅವಿರೋಧ ಆಯ್ಕೆಗೊಂಡಿದ್ದು ಒಂದು ಉತ್ತಮ ವಾತಾವರಣ ನಿರ್ಮಾಣ ಸಂತೋಷ ತಂದಿದೆ. ಮುಂದೆ ಸರಕಾರಿ ಶಾಲೆ ನಮ್ಮ ಶಾಲೆ ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಾಲಾ ಸುತ್ತಮುತ್ತಲಿನ ಪ್ರದೇಶದ ಪ್ರತಿಯೊಂದು ಮನೆಯ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸುವ ಪಣತೊಡಬೇಕು. ಗ್ರಾ.ಪಂ ನಿಂದ ಈಗಾಗಲೇ ಶೌಚಾಲಯಕ್ಕೆ ಹಣ ಮಂಜೂರು ಶೌಚಾಲಯ ಕಾಮಗಾರಿ ಅಂತಿಮ ಹಂತದಲ್ಲಿದೆ. ಮುಂದೆ ಕಾಂಪೌಂಡು ರಚನೆ ಹಾಗೂ ಅಕ್ಷರದಾಸೋಹ ಕಟ್ಟಡ ನಿರ್ಮಾಣ ಮಾಡುವ ಯೋಚನೆ ಇದೆ. ಮುಂದೆಯೂ ಗ್ರಾ.ಪಂ ತಮ್ಮ ಜೊತೆ ಇದೆ ಸಮಿತಿ ಸದಸ್ಯರು ಹೊಂದಾಣಿಕೆಯಿಂದ ಕೆಲಸ ಮಾಡಿ ಅಭಿವೃದ್ಧಿ ಗೊಳಿಸಿ ಎಂದು ಹೇಳಿ ಶುಭ ಹಾರೖೆಸಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೖೆ ಪಳ್ಳತ್ತಾರು, ಶಾಲಾ ಶಾಲಾಭಿವೖದ್ಧಿ ಸಮಿತಿ ಮಾಜಿ ಬಾಬು ಮೂಲ್ಯ, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ನೂತನ ಸಮಿತಿ ಅಧ್ಯಕ್ಷ ಗಿರೀಶ್ ಗೌಡ ಕನ್ಶಯ, ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೖೆಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಲೋಚನಾ ನೇರ್ಲಂಪಾಡಿ, ಸದಸ್ಯರಾದ ಕಾವ್ಯಾ, ದಾಮೋದರ ಪಿ, ಬಾಬು ಮೂಲ್ಯ, ಚಂದ್ರಿಕಾ, ಉಷಾಲತಾ, ಲತಾಕುಮಾರಿ, ಶೋಭಾ ಬಿ, ವಿಜಯಕುಮಾರ ಪಿ, ಸುಮಯ್ಯ, ರೈಹಾನ,ಸೆಮಿರಾ, ಪೌಝಿಯಾ, ರೈಹಾನ ಎಸ್ ಎಮ್ , ವಿಜಯಲಕ್ಷ್ಮಿ, ಸುನೀತಾ ಎ, ಸಾವಿತ್ರಿ ಎ.ಬಿ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಸಮಿತಿ ರಚನೆ
ಶಾಲಾಭಿವೃದ್ಧಿ ನೂತನ ಸಮಿತಿ ಅಧ್ಯಕ್ಷರಾಗಿ ಗಿರೀಶ್ ಗೌಡ ಕನ್ನಯ, ಉಪಾಧ್ಯಕ್ಷರಾಗಿ ಸುಲೋಚನಾ ಎಸ್ ನಾಯ್ಕ ನೇರ್ಲಂಪಾಡಿ ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ, ಕಾವ್ಯಾ, ದಾಮೋದರ ಪಿ, ಮೖೆಂದನಡ್ಕ ಬಾಬು ಮೂಲ್ಯ , ಚಂದ್ರಿಕಾ, ಉಷಾಲತಾ, ಲತಾಕುಮಾರಿ, ಶೋಭಾ ಬಿ, ವಿಜಯಕುಮಾರ ಪಿ, ಸುಮಯ್ಯ, ರೈಹಾನ, ಸೆಮಿರಾ, ಪೌಝಿಯಾ, ರೈಹಾನ ಎಸ್ ಎಮ್ , ವಿಜಯಲಕ್ಷ್ಮಿ, ಸುನೀತಾ ಎ, ಸಾವಿತ್ರಿ ಎ.ಬಿ ಇವರುಗಳನ್ನು ಆಯ್ಕೆ ಮಾಡಲಾಯಿತು.
ಪದ ನಿಮಿತ್ತ ಶಿಕ್ಷಕರಾಗಿ ಶಾಲಾ ಮುಖ್ಯ ಶಿಕ್ಷಕಿ , ಹರಿಣಾಕ್ಷಿ ಎ, ಮತ್ತು ಅಂಗನವಾಡಿ ಕಾರ್ಯಕರ್ತೆ ಚಂದ್ರಮ್ಮ ಹಾಗೂ ನಾಮ ನಿರ್ದೇಶಕ ಸದಸ್ಯರಾಗಿ ಗ್ರಾ. ಪಂ ಸದಸ್ಯ ಸಂತೋಷ ಆಳ್ವ, ಪಡುಮಲೆ, ಪದವಿಧರ ಶಿಕ್ಷಕಿ ವಿಜಯಲಕ್ಷ್ಮಿ, ಶಾಲಾ ನಾಯಕಿ ಫಾತಿಮತ್ ಶಫಾರನ್ನು ಆಯ್ಕೆ ಮಾಡಲಾಯಿತು