ಪುತ್ತೂರು: ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾದ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಪಡ್ನೂರು ಮುಂಡಾಜೆ ನಿವಾಸಿ ಗಿರಿಜಾ ದೇವಿ, ಮಂಟು ಪಾಸ್ವಾನ ದಂಪತಿ ಪುತ್ರಿ ರೂಪ (19ವ) ನಾಪತ್ತೆಯಾದ ಯುವತಿ.
ರೂಪ ಅವರ ತಾಯಿ ಮಂಗಳೂರಿನ ನರ್ಸಿಂಗ್ ಹೋಂ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಂದೆ ಉಡುಪಿಯಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿದ್ದು, ಮನೆಯಲ್ಲಿ ರೂಪ ಹಾಗೂ ಆಕೆಯ ಸಹೋದರ ಮಾತ್ರ ವಾಸವಿದ್ದರು. ನಿನ್ನೆ (ಜು.1) ಜೆರಾಕ್ಸ್ ಮಾಡಿಸಲು ಪೇಟೆಗೆ ಹೋಗಿ ಬರುವುದಾಗಿ ತೆರಳಿದ ರೂಪ ಮನೆಗೆ ಹಿಂತಿರುಗಿಲ್ಲವೆಂದು ದೂರಿನಲ್ಲಿ ತಿಳಿಸಿದ್ದಾರೆ.
ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸ್ನೇಹಿತರ ಮನೆಗೂ ತೆರಳದೆ, ಸಂಬಂಧಿಕರ ಮನೆಗೆ ಕೂಡ ಹೋಗದೆ ಯುವತಿ ನಾಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.