ಸವಣೂರು : ಸರಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಸಮುದಾಯದ ಪಾತ್ರ ಮಹತ್ವದ್ದು.ಸರಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ,ಯು.ಕೆ.ಜಿ.ತರಗತಿಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೂ ಆರಂಭದಲ್ಲಿಯೇ ಆಂಗ್ಲ ಮಾಧ್ಯಮ ಶಿಕ್ಷಣ ದೊರಕಿದಂತಾಗುತ್ತದೆ.ಸರಕಾರಿ ಶಾಲೆ ಎಂದು ನಾವು ಹೇಳುವ ಬದಲು ನಮ್ಮೂರ ಶಾಲೆ ಎಂದು ಹೇಳಬೇಕು ಎಂದು ನಮ್ಮೂರ ಶಾಲೆ ಸಾಮೆತಡ್ಕದ ಶಿಕ್ಷಣ ತಜ್ಞ ದಿನೇಶ್ ಕಾಮತ್ ಹೇಳಿದರು.

ಅವರು ಜು.2ರಂದು ಸವಣೂರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ನಡೆದ ಪೂರ್ವ ಪ್ರಾಥಮಿಕ ತರಗತಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಎಲ್ಲಾ ವ್ಯವಸ್ಥೆಗಳು ಇರುವ ಈ ಸರಕಾರಿ ಶಾಲೆಯನ್ನು ಪಿ.ಎಂ.ಶ್ರೀ ಶಾಲೆ ಅಥವಾ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ,ಊರವರು ಪ್ರಯತ್ನಿಸಬೇಕು ಎಂದು ದಿನೇಶ್ ಕಾಮತ್ ಹೇಳಿದರು.
ಎಲ್.ಕೆ.ಜಿ,ಯು.ಕೆ.ಜಿ.ತರಗತಿಗಳನ್ನು ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮವನ್ನು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಹಾಗೂ ಅತಿಥಿಗಳು ದೀಪಬೆಳಗಿಸಿ ಉದ್ಘಾಟಿಸಿದರು.
ಸವಣೂರು ಕ್ಲಸ್ಟರ್ ಸಿ.ಆರ್.ಪಿ.ಜಯಂತ ವೈ ಮಾತನಾಡಿ, ಸವಣೂರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಈ ಬಾರಿ 2 ಶಾಲೆಗಳಲ್ಲಿ ಎಲ್.ಕೆ.ಜಿ,ಯು.ಕೆ.ಜಿ.ತರಗತಿಗಳು ಆರಂಭಗೊಂಡಿದೆ ಇದು ಸಂತಸದ ವಿಚಾರ. ಎರಡೂ ಶಾಲೆಗಳ ಎಲ್.ಕೆ.ಜಿ,ಯು.ಕೆ.ಜಿ.ಶಿಕ್ಷಕರ ಒಂದು ತಿಂಗಳ ವೇತನವನ್ನು ತಾನು ನೀಡುವುದಾಗಿ ಹೇಳಿದರು.
ಡಿಜಿಟಲ್ ಕಲಿಕೆಯ ಸ್ಮಾರ್ಟ್ ಟಿ.ವಿ.ಉದ್ಘಾಟಿಸಿದ, ಬೆಳಂದೂರು ಈಡನ್ ಗ್ಲೋಬಲ್ ಶಾಲೆಯ ಟ್ರಸ್ಟಿ ಅಬ್ದುಲ್ ಖಾದರ್ ಹಾಜಿ ಮಾತನಾಡಿ, ಇಂದು ಸಮಾಜದ ಮುಖ್ಯವಾಹಿನಿಯಲ್ಲಿರುವ ಬಹುತೇಕ ಎಲ್ಲಾ ಗಣ್ಯರೂ ಕೂಡ ಸರಕಾರಿ ಶಾಲೆಗಳಲ್ಲಿಯೇ ಕಲಿತವರು.ಸರಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಇರಬಾರದು. ನಾವು ಕಲಿತ ಈ ಶಾಲೆಯ ಅಭಿವೃದ್ಧಿಗಾಗಿ ಸದಾ ಬೆಂಬಲಿಸುವುದಾಗಿ ಹೇಳಿದರು.
ಸವಣೂರು ಗ್ರಾ.ಪಂ.ಸದಸ್ಯರಾದ ರಾಜೀವಿ ಶೆಟ್ಟಿ , ರಫೀಕ್ ಎಂ.ಎ.,ಚಂದ್ರಾವತಿ ಸುಣ್ಣಾಜೆ ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಕಾರ್ಯದರ್ಶಿ ಎಸ್.ಎ.ಅಬ್ದುಲ್ ,ಸವಣೂರು ಪ್ರಾ.ಕೃ.ಪ.ಸ.ಸಂಘದ ಸಿಇಓ ಚಂದ್ರಶೇಖರ ಪಿ., ಶ್ರೀರಾಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯ ಈಶ್ವರ ಗೌಡ ,ಶಾಲಾಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷ ಶಿವರಾಮ ಗೌಡ ಮೆದು ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಶ್ರಫ್ ಜನತಾ ಮಾತನಾಡಿ, ಶಾಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಸಹಕರಿಸುತ್ತಿರುವ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿ ನಿರಂತರವಾಗಿ ಸಹಕಾರ ಯಾಚಿಸಿದರು.
ನರ್ಸರಿ ಶಿಕ್ಷಕಿ ನಳಿನಾಕ್ಷಿ ,ಸಹಾಯಕಿ ಚಂದ್ರಾವತಿ ಅವರಿಗೆ ಹೂ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸವಣೂರು ಗ್ರಾ.ಪಂ.ಸದಸ್ಯೆ ಇಂದಿರಾ ಬೇರಿಕೆ,ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ರೇವತಿ , ಉದ್ಯಮಿ ಎಸ್.ಆರ್.ಅಬ್ದುಲ್ ಕರೀಂ ಮೌಲ , ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ವಲಯ ಮೇಲ್ವಿಚಾರಕಿ ವೀಣಾ,ತಾಯಂದಿರ ಸಮಿತಿಯ ಅಧ್ಯಕ್ಷೆ ತಾಹಿರಾ ,ರಝಾಕ್ , ರಾಮಕೃಷ್ಣ ಪ್ರಭು ,ಸವಣೂರು ಆರೇಲ್ತಡಿ ಶಾಲಾ ಮುಖ್ಯಶಿಕ್ಷಕ ಶ್ರೀಕಾಂತ್, ಅಮೈ ಶಾಲಾ ಮುಖ್ಯಶಿಕ್ಷಕ ಜಗನ್ನಾಥ್,ಚೆನ್ನಾವರ ಶಾಲಾ ಮುಖ್ಯಶಿಕ್ಷಕ ಮಲ್ಲೇಶಯ್ಯ ,ಚೆನ್ನಾವರ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪುರಂದರ ಕೆ ಮೊದಲಾದವರಿದ್ದರು.
ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನೆ
ಶೈಕ್ಷಣಿಕ ಸಾಲಿನ ಎಸ್ಸೆಸೆಲ್ಸಿ,ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಅಲ್ ಅನ್ಸಾರ್ ಯೂತ್ ಕಮಿಟಿ ವತಿಯಿಂದ ಶಾಲೆಗೆ ಬೇಬಿ ಚಯರ್ ಕೊಡುಗೆ ಹಸ್ತಾಂತರಿಸಲಾಯಿತು.ಸವಣೂರು ಸ.ಉ.ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಕೆ.ಪಿ.ನಿಂಗರಾಜು ಸ್ವಾಗತಿಸಿದರು. ಶಿಕ್ಷಕಿ ಶಶಿಕಲಾ ವಂದಿಸಿದರು.ಶಿಕ್ಷಕ ಓಬಲೇಶ್ ನಿರೂಪಿಸಿದರು.