ಸೆ.27,28 :ವಿಜಯಸಾಮ್ರಾಟ್ ಆಶ್ರಯದಲ್ಲಿ ಪಿಲಿಗೊಬ್ಬು 2025 ಸೀಸನ್-3 : ಪೂರ್ವಭಾವಿ ಸಭೆ

0

ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ವತಿಯಿಂದ ಪುತ್ತೂರು ಮಹಾತೋಭಾರ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಸೆಪ್ಟೆಂಬರ್-27 ಹಾಗೂ 28 ರಂದು ನಡೆಯುವ ಪಿಲಿಗೊಬ್ಬು-2025 ಸೀಸನ್-3 ಇದರ ಪೂರ್ವಭಾವಿ ಸಭೆಯು ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜರವರ ಅಧ್ಯಕ್ಷತೆಯಲ್ಲಿ ದರ್ಬೆಯ ಶ್ರೀ ರಾಮ ಸೌಧ ಕಟ್ಟಡದಲ್ಲಿ ನಡೆಯಿತು.

ಸೆಪ್ಟೆಂಬರ್-27 ನೇ ತಾರೀಖಿಗೆ ಫುಡ್ ಫೆಸ್ಟ್ ಗೆ ಚಾಲನೆ ನೀಡಿ,ಸೆಪ್ಟೆಂಬರ್- 28 ನೇ ತಾರೀಖಿನಂದು ಪಿಲಿಗೊಬ್ಬು ಕಾರ್ಯಕ್ರಮವು ನಡೆಯಲಿದೆ.ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಯ ಕುರಿತು ಚರ್ಚೆ ನಡೆಯಿತು.

ಸಭೆಯಲ್ಲಿ ಪಿಲಿಗೊಬ್ಬು ಸಮಿತಿಯ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು,ಉಪಾಧ್ಯಕ್ಷ ಶಂಕರ್ ಭಟ್ ಈಶಾನ್ಯ,ಸಂಚಾಲಕ ನಾಗರಾಜ್ ನಡುವಡ್ಕ,ಕಾರ್ಯಾದ್ಯಕ್ಷ ಸುಜಿತ್ ರೈ ಪಾಲ್ತಾಡ್ ಸೇರಿದಂತೆ ಸಂಸ್ಥೆಯ ನೂರಾರು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here