ನಿಡ್ಪಳ್ಳಿ : ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ನಡುಮನೆ ದಿ.ಚಂದಪ್ಪ ಶೆಟ್ಟಿಯವರ ಪತ್ನಿ ಪರಮೇಶ್ವರಿ ಶೆಟ್ಟಿ(78.ವ) ಅವರು ಅಲ್ಪಕಾಲದ ಅಸೌಖ್ಯದಿಂದ ನಿಡ್ಪಳ್ಳಿ ಗ್ರಾಮದ ಕೊಳಂಬೆತ್ತಿಮಾರು ತನ್ನ ಮಗಳ ಮನೆಯಲ್ಲಿ ಜು.2 ರಂದು ನಿಧನರಾದರು.
ಮೃತರು ಪುತ್ರ ಶ್ರೀಧರ ಶೆಟ್ಟಿ, ಪುತ್ರಿಯರಾದ ಸುನಂದ, ಗೀತಾ, ಲೀಲಾವತಿ, ಅಳಿಯಂದಿರಾದ ಮಂಜುನಾಥ ರೈ ಕೊಳಂಬೆತ್ತಿಮಾರು, ಸದಾಶಿವ ರೈ ಮಾಡಾವು, ಅರುಣ್ ಕುಮಾರ್ ರೈ ಅಮೈ ಕೆರೆಮೂಲೆ, ಸೊಸೆ ಪೂರ್ಣಿಮಾ ಮತ್ತು ಮೊಮ್ಮಕ್ಕಳು ಹಾಗೂ ಕೊರಿಕ್ಕಾರು ಕುಟುಂಬಸ್ಥರನ್ನು, ಬಂಧು ಬಳಗವನ್ನು ಅಗಲಿದ್ದಾರೆ.