ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 2025-26 ನೇ ಸಾಲಿನ ಮೊಂಟೆಸರಿ ಶಿಕ್ಷಕಿಯರ DMEd (N.T.T) ತರಬೇತಿ ಆರಂಭ

0

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 2025-26ನೇ ಸಾಲಿ ಶೈಕ್ಷಣಿಕ ವರ್ಷದ ನೂತನ ಮೊಂಟೆಸರಿ ಶಿಕ್ಷಕಿಯರ ತರಬೇತಿ N.T.T ತರಗತಿಯು ಜುಲೈ 3 ರಂದು ಆರಂಭಗೊಂಡಿತು.

ಕಾರ‍್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ.ವಿ. ಮಾತನಾಡಿ, ನೂತನ ವರ್ಷಕ್ಕೆ ದಾಖಲಾದ ಪ್ರಶಿಕ್ಷಣಾರ್ಥಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಮಾತನಾಡಿ, ನಾವು ನಮ್ಮ ವೃತ್ತಿಯನ್ನು ಪ್ರೀತಿಸಬೇಕು, ಆಗ ನಮ್ಮ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ ಎಂದರು.

ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಎನ್.ಡಿ ಮಾತನಾಡಿ, ನಮ್ಮ ಜೀವನದಲ್ಲಿ ಅತ್ಯಂತ ಗೌರವಯುತವಾದ ಕೆಲಸ ಎಂದರೆ ಅದು ಶಿಕ್ಷಕ ವೃತ್ತಿ. ಅಂತಹ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ನಿಮ್ಮ ಬದುಕಿನಲ್ಲಿ ಉತ್ತಮ ಶಿಕ್ಷಕಿಯರಾಗಿ ಎಂದು ಹಾರೈಸಿದರು. N.T.T ಮೊಂಟೆಸರಿ ಶಿಕ್ಷಕಿಯ ಮುಖ್ಯಸ್ಥೆ ಹರ್ಷಿತಾ ರೈ N.T.T ತರಗತಿಗಳಲ್ಲಿ ಬರುವ ವಿಷಯಗಳು, ಭೋದನೆಯ ವಿಧಾನ ಹಾಗೂ ಓ.ಖಿ.ಖಿ ಶಿಕ್ಷಕಿಯ ತರಬೇತಿ ಕುರಿತು ತಿಳಿಸಿದರು. ಕಾರ‍್ಯಕ್ರಮದಲ್ಲಿ ಜೀವಶಾಸ್ತ್ರ ಉಪನ್ಯಾಸಕಿ ಮೇಘಾ ಹಾಗೂ N.T.T ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here