ಪುತ್ತೂರು: ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಭೆಯು ಜು.3 ರಂದು ಸವಣೂರು ಶ್ರೀ ವಿನಾಯಕ ಸಭಾ ಭವನದಲ್ಲಿ ಜರಗಿತು.

ಸಮಿತಿಯ ಗೌರವಾಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಮಾತನಾಡಿ 2025 ನೇ ಗಣೇಶೋತ್ಸವ ಆಚರಣೆಯನ್ನು ಸಂಭ್ರಮದಿಂದ ಆಚರಿಸುವ ಮೂಲಕ ಸವಣೂರಿಗೆ ಮಾದರಿ ಆಗುವಂತಹ ಕಾರ್ಯಕ್ರಮ ಆಗುವ ಲ್ಲಿ ಎಲ್ಲರ ಸಹಕಾರ ಕೋರಿದರು.
ಸಮಿತಿಯ ಪದಾಧಿಕಾರಿಗಳಾದ ಸುಂದರ ರೈ ಸವಣೂರು, ಪ್ರಭಾಕರ್ ಶೆಟ್ಟಿ ನಡುಬೈಲು, ರಾಘವ ಗೌಡ ಸವಣೂರು, ಗಂಗಾಧರ ಸುಣ್ಣಾಜೆ, ಚಂದಪ್ಪ ಪೂಜಾರಿ ಊರುಸಾಗು, ಚೇತನ್ ಕುಮಾರ್ ಕೋಡಿಬೈಲು, ಚಂದ್ರಶೇಖರ ಪಿ, ಮೋಹನ್ ರೈ ಕೆರೆಕೋಡಿ, ಸಂಪತ್ ಕುಮಾರ್ ಇಂದ್ರ, ಸುರೇಶ್ ಸರ್ವೆ, ವೆಂಕಪ್ಪ ಗೌಡ ಅಡೀಲು, ಬಾಲಚಂದ್ರ ರೈ ಕೆರೆಕೋಡಿ, ಗಂಗಾಧರ್ ಪೆರಿಯಡ್ಕ, ಸತೀಶ್ ಬಲ್ಯಾಯ ಕನ್ನಡಕುಮೇರು, ದಿವಾಕರ್ ಬಸ್ತಿ,ಜಯರಾಮ ರೈ ಮೂಡಂಬೈಲು, ಶೇಖರ್ ಬಸ್ತಿ, ಕುಂಇ್ಞ ಆರೇಲ್ತಡಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಧಾಕರ್ ರೈ ದೇವಸ್ಯ 2024 ನೇ ಸಾಲಿನ ವಾರ್ಷಿಕ ವರದಿ ವಾಚಿಸಿ, ಸ್ವಾಗತಿಸಿದರು.
ಕೋಶಾಧಿಕಾರಿ ರಾಮಕೃಷ್ಣ ಪ್ರಭು ಸವಣೂರು ವಂದಿಸಿದರು. 2025 ನೇ ಸಾಲಿನ ನೂತನ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು ಮತ್ತು ಕಾರ್ಯದರ್ಶಿ ಸತೀಶ್ ಬಲ್ಯಾಯ ಕನ್ನಡಕುಮೇರುರವರಿಗೆ ಸಮಿತಿಯ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈಯವರು ಸಮಿತಿಯ ಪುಸ್ತುಕ ಹಸ್ತಾಂತರಿಸಿ, ಶುಭಹಾರೈಸಿದರು.