ಉಪ್ಪಿನಂಗಡಿ: ಸಾರ್ವಜನಿಕ ಮೊಸರು ಕುಡಿಕೆ ಸಮಿತಿ ಉಪ್ಪಿನಂಗಡಿ ಇದರ ವತಿಯಿಂದ ಆ.16ರಂದು ನಡೆಯಲಿರುವ 46ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ಮೊಸರು ಕುಡಿಕೆ ಉತ್ಸವವನ್ನು ಅದ್ದೂರಿಯಾಗಿ ಆಯೋಜಿಸುವ ಕುರಿತಾಗಿ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಲ್ಲಿ ಸಮಿತಿಯ ಪೂರ್ವಭಾವಿ ಸಭೆ ನಡೆಯಿತು.

ಈ ಸಂದರ್ಭ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಸುರೇಶ್ ಅತ್ರೆಮಜಲು, ಗೌರವಾಧ್ಯಕ್ಷ ಚಂದಪ್ಪ ಮೂಲ್ಯ, ಜಯಂತ ಪೊರೋಳಿ, ಕಾರ್ಯದರ್ಶಿ ವಿದ್ಯಾಧರ ಜೈನ್, ಜೊತೆ ಕಾರ್ಯದರ್ಶಿಗಳಾದ ಧನಂಜಯ ನಟ್ಟಿಬೈಲು, ಸಂತೋಷ್ ಅಡೆಕ್ಕಲ್, ಕೋಶಾಧಿಕಾರಿ ಲೊಕೇಶ್ ಜೈನ್ ಉಪ್ಪಿನಂಗಡಿ, ಪದಾಧಿಕಾರಿಗಳಾದ ರಾಮಚಂದ್ರ ಮಣಿಯಾಣಿ, ಶರತ್ ಕೋಟೆ, ಚಂದ್ರಶೇಖರ ಮಡಿವಾಳ, ಪ್ರಸಾದ್ ಬಂಡಾರಿ ಮತ್ತಿತರರು ಉಪಸ್ಥಿತರಿದ್ದರು.