
ಪುತ್ತೂರು: ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.5ರಂದು ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಿದರು. ಮುಖ್ಯ ಅತಿಥಿಯಾಗಿ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ರಶ್ಮಿ ಹೆಗ್ಡೆ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಗಿಡನೆಡುವಂತೆ ಸಲಹೆ ನೀಡಿದರು.
ಶಾಲಾ ಪ್ರಾಂಶುಪಾಲೆ ಅನಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಿಡನೆಟ್ಟು ಅದನ್ನು ಪೋಷಿಸಿ ಸಂರಕ್ಷಿಸಿದಾಗ ಮಾತ್ರ ನಮ್ಮೆಲ್ಲರ ಉಳಿವು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಆವರಣದಲ್ಲಿ ಹೂಗಿಡ ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಿದರು. ಗ್ರೀಷ್ಮ ಸಾಗ್ವತಿಸಿ, ಜೋನಲ್ ಅನೋನ ಡಿಸೋಜ ವಂದಿಸಿದರು. ನಿಹಾನಿ ಮುತ್ಲಾಜೆ, ಟಿಯೋನಾ ಲೆನಿಟಾ ಸಿಕ್ವೇರಾ, ಮಹಮ್ಮದ್ ಅಲೂಫ್ ಕಾರ್ಯಕ್ರಮ ನಿರೂಪಿಸಿದರು.