ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ದರ್ಬೆಯ ಬಳಿ ರಸ್ತೆಯಲ್ಲಿ ಹೊಂಡ ಬಿದ್ದಿದೆ. ನಗರ ಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ರಸ್ತೆಯ ಹೊಂಡವನ್ನುಮುಚ್ಚಲು ಆಡಳಿತಕ್ಕೆ ಸಾಧ್ಯವಾಗದೇ ಇರುವುದು ದೊಡ್ಡ ದುರಂತವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಪೆರ್ನೆಯಲ್ಲಿ ಬಿಜೆಪಿ ವಿರುದ್ದ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ಪಿಡಬ್ಲ್ಯುಡಿ ರಸ್ತೆಯಲ್ಲಿ ಎಲ್ಲೆಲ್ಲಿ ಹೊಂಡ ಬಿದ್ದಿದೆಯೋ ಅಲ್ಲೆಲ್ಲಾ ಹೊಂಡ ಮುಚ್ಚುವಂತೆ ವಾರದ ಮೊದಲು ಸೂಚನೆ ನೀಡಿದ್ದೇನೆ. ಆದರೆ ನಗರಸಭಾ ವ್ಯಾಪ್ತಿಯ ದರ್ಬೆಯಲ್ಲಿ ರಸ್ತೆ ಹೊಂಡ ಬಿದ್ದಿದೆ. ಅದನ್ನು ಮುಚ್ಚುವ ಕೆಲಸವನ್ನಾದರೂ ಮಾಡಿಸಿ. ಬೇರೇನು ಮಾಡಿಲ್ಲ, ಅದನ್ನಾದರೂ ಮಾಡಿ. ವೋಟು ಹಾಕಿದ್ದಕ್ಕಾದರೂ ಋಣ ತೀರಿಸಿ ಎಂದು ಮನವಿ ಮಾಡಿದರು.
