ಕುಲಾಲ ಸಂಘದಿಂದ ಜಿಲ್ಲಾ ಮಟ್ಟದ ‘ಮೂಲ್ಯೆರೆ ಕೆಸರ್‌ದ ಗೊಬ್ಬು’

0

ಪುತ್ತೂರು: ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ ವತಿಯಿಂದ ಜು.6ರಂದು ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂದಿರದ ಎದುರಿನ ಅಪ್ಪಿ ಮೂಲ್ಯ ಇವರ ಗದ್ದೆಯಲ್ಲಿ ನಡೆದ ಜಿಲ್ಲಾ ಮಟ್ಟದ ‘ಮೂಲ್ಯೆರೆ ಕೆಸರ್ ದ ಗೊಬ್ಬು’ ಮೇಳೈಸಿತು.

ಕಾರ್ಯಕ್ರಮವನ್ನು ನಿವೃತ್ತ ಕಮಾಂಡೆಂಟ್, ಕರ್ನಾಟಕ ರಾಜ್ಯ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾಗಿರುವ ಚಂದಪ್ಪ ಮೂಲ್ಯ ಉಪ್ಪಿನಂಗಡಿ ಮಾತನಾಡಿ, ಮಣ್ಣಿಗೆ ವಿಶೇಷ ಶಕ್ತಿಯಿಂದ. ಮಣ್ಣಿನಲ್ಲಿಯವ ಔಷಧಿ ಸತ್ವ ಬೇರೆ ಎಲ್ಲಿಯೂ ಇಲ್ಲ. ನ್ಯಾಚುರೋಪತಿ ಚಿಕಿತ್ಸಾ ಪದ್ದತಿಯಲ್ಲಿಯೂ ಮಡ್ ತೆರಪಿ ಚಿಕಿತ್ಸೆಯಿದೆ. ಮಣ್ಣಿನಲ್ಲಿ ಒತ್ತಡ ನಿವಾರಣೆ, ರಕ್ತ ಪರಿಚಲನೆ ಉತ್ತಮವಾಗಿಸುವುದು ಹಾಗೂ ಶರೀದರದಲ್ಲಿರುವ ಆಶುದ್ದತೆ ನಿವಾರಿಸುವ ಶಕ್ತಿಯಿದೆ ಎಂದ ಅವರು ಪುರಾತನ ನಸಿಸುತ್ತಿರುವ ಆಟಗಳನ್ನು ಕೆಸರುಗದ್ದೆ ಕ್ರೀಡೆಯ ಮೂಲಕ ಆಯೋಜಿಸುವ ಮೂಲಕ ಹೊಸ ಪೀಟಿಕೆ ಬರೆದಿರುವ ಕುಲಾಲ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.


ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಅನಿಲ್‌ದಾಸ್ ಮಾತನಾಡಿ, ಸಮುದಾಯದವರನ್ನು ಒಟ್ಟು ಸೇರಿಸುವ ಸಂಘದ ಕಾರ್ಯದಲ್ಲಿ ಸಮಾಜ ಬಾಂಧವರೆಲ್ಲರೂ ಒಟ್ಟು ಸೇರಿಕೊಳ್ಳಬೇಕು. ಸ್ವಾರ್ಥ ಬಿಟ್ಟು ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ನಾಯಕರು ಯುವ ಜನತೆಗೆ ಮಾರ್ಗದರ್ಶನ ನೀಡಬೇಕು. ಪುತ್ತೂರು ಸಂಘವು ಜಿಲ್ಲೆಯಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.


ಮಂಗಳೂರು ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ವೀರನಾರಾಯಣ ಸೇವಾ ಸಮಿತಿ ಅಧ್ಯಕ್ಷ ಕಿರಣ್ ಅಟ್ಲೂರು ಮಾತನಾಡಿ, ಪ್ರತಿಷ್ಠಿತ ಹಾಗೂ ಬಲೀಷ್ಠ ನಾಯಕರನ್ನು ಹೊಂದಿರುವ ಪುತ್ತೂರು ಸಂಘದ ಮುಖಾಂತರ ಕೆಸರ್‌ದ ಗೊಬ್ಬ ಕಾರ್ಯಕ್ರಮ ಉತ್ತಮ, ಅಚ್ಚುಕಟ್ಟಿನಲ್ಲಿ ಅಯೋಜನೆಗೊಂಡಿರುವುದನ್ನು ಶ್ಲಾಘಿಸಿದರು.
ಕುಲಾಲ ಸಂಘದ ಜಿಲ್ಲಾ ಸಾಂಸ್ಕೃತಿ ಕಾರ್ಯದರ್ಶಿ ನವೀನ್ ಕುಲಾಲ್ ಮಾತನಾಡಿ, ಪುತ್ತೂರು ಸಂಘದ ಮುಖಾಂತರ ಪ್ರಥಮವಾಗಿ ನಡೆಸುವ ಕೆಸರ್‌ದ ಗೊಬ್ಬು ಸಮುದಾಯದವರನ್ನು ಒಟ್ಟು ಸೇರಿದಲು ಸಹಕಾರಿಯಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶೇಷಪ್ಪ ಕುಲಾಲ್ ಮಾತನಾಡಿ, ಪುತ್ತೂರು ಕುಲಾಲ ಸಂಘದ ಮುಖಾಂತರ ಪ್ರಥಮ ಬಾರಿಗೆ ಮೂಲ್ಯೆರೆ ಕೆಸರ್‌ದ ಗೊಬ್ಬು ಅನ್ನು ಆಯೋಜಸಿಕೊಂಡಿದ್ದು ಇದರ ಯಶಸ್ಸಿಗೆ ಸಹಕರಿದವರಿಗೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ಗೌರವಾರ್ಪಣೆ:
ಕೆಸರ್‌ದ ಗೊಬ್ಬು ಆಯೋಜನೆಗೆ ಗದ್ದೆ ಒದಗಿಸಿದ ಬೆದ್ರಾಳ ಅಪ್ಪಿ ಮೂಲ್ಯರವರನ್ನು ಸನ್ಮಾನಿಸಲಾಯಿತು. ಕ್ರೀಡೆ ಆಯೋಜನೆಗೆ ಸಹಕರಿಸಿದ ಲಲಿತಾ ಶೆಟ್ಟಿ ಬೆದ್ರಾಳರವರನ್ನು ಗೌರವಿಸಲಾಯಿತು. ಕ್ರೀಡಾ ಕಾರ್ಯದರ್ಶಿ ಹರೀಶ್ ಕುಲಾಲ್ ಶೇವಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾವ್ಯ, ಸ್ವಸ್ತಿಕಾ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ರವಿ ಕುಮಾರ್ ಕೈತಡ್ಕ ಪ್ರಾರ್ಥಿಸಿದರು. ಸಂಘದ ಪದಾಧಿಕಾರಿಗಳಾದ ಸುಧಾಕರ ಕುಲಾಲ್ ನಡುವಾಲ್, ಕೃಷ್ಣಪ್ಪ ಮಚ್ಚಿಮಲೆ, ಚಿತ್ರಲೇಖಾ, ಪ್ರಕಾಶ್ ಕುಲಾಲ್ ಮುಕ್ವೆ, ನಾರಾಯಣ ಮೂಲ್ಯ ಬೆದ್ರಾಳ, ಸತೀಶ್ ಕುಲಾಲ್ ಉಡ್ಡಂಗಳ, ಅನಿತಾ ಕೊಡಿಮರ ಅತಿಥಿಗಳನ್ನು ತಂಬೂಲ ನೀಡಿ, ಶಾಲು ಹಾಕಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ತೇಜ ಕುಮಾರ್ ವಂದಿಸಿದರು. ಯತೀಶ್ ಕುಲಾಲ್ ಕೋರ್ಮಂಡ ಕಾರ್ಯಕ್ರಮ ನಿರೂಪಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಮಕ್ಕಳು, ಮಹಿಳೆಯರಿಗೆ ಹಾಗೂ ಪುರುಷರಿಗಾಗಿ ಪ್ರತ್ಯೇಕವಾಗಿ ನಡೆದ ವಿವಿಧ ಮನೋರಂಜನಾತ್ಮಕ ಕ್ರೀಡೆಗಳು ನಡೆಯಿತು. ಕುಲಾಲ ಸಂಘದಿಂದ ಪ್ರಥಮ ಬಾರಿಗೆ ನಡೆದ ಕೆಸರು ಗದ್ದೆ ಕ್ರೀಡೆಯಲ್ಲಿ ಮಕ್ಕಳು, ಮಹಿಳೆಯರು, ಪುರುಷರ ಜೊತೆಗೆ ಹಿರಿಯ ಉತ್ಸಾಹದಲ್ಲಿ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here