ನಿಡ್ಪಳ್ಳಿ: ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಆ.8ರಂದು ನಡೆಯುವ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜು.5ರಂದು ರಣಮಂಗಲ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯರವರು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಆಮಂತ್ರಣ ಪತ್ರ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು. ಪೂಜಾ ಸಮಿತಿ ಅಧ್ಯಕ್ಷೆ ಗೀತಾ.ಆರ್.ರೈ, ಕಾರ್ಯದರ್ಶಿ ಶಾರದಾ ಗೋಪಾಲ, ಸದಾಶಿವ ರೈ ಸೂರಂಬೈಲು, ಸುಧಾಕರ ರೈ, ಪೂಜಾ ಸಮಿತಿ ಕೋಶಾಧಿಕಾರಿ ಜಯಶ್ರೀ ದೇವಸ್ಯ, ರಮಾನಾಥ ರೈ, ಶ್ರೀನಿವಾಸ ರೈ, ವೇದ.ಎಸ್.ರೈ, ತಾರಾ.ರೈ, ಹರಿಣಾಕ್ಷಿ ರೈ, ಪ್ರತಿಭಾ ಒಕುಣ್ಣಾಯ, ಉಷಾ, ಅನುರಾಧ ಕೊಂದಲಡ್ಕ ಹಾಗೂ ಮುರಳಿ ಉಪಸ್ಥಿತರಿದ್ದರು.