ಅಧ್ಯಕ್ಷೆ :ಪ್ರೇಮಲತಾ ರಾವ್, ಕಾರ್ಯದರ್ಶಿ: ಅರವಿಂದ್ ಭಗವಾನ್ ರೈ, ಕೊಶಾಧಿಕಾರಿ:ಸುಧಾಕರ ಕೆ.ಪಿ.
ಪುತ್ತೂರು:ಲಯನ್ಸ್ ಕ್ಲಬ್ ಪುತ್ತೂರು ಇದರ 2025 ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ಇತ್ತೀಚೆಗೆ ನಡೆದಿದ್ದು.ಅಧ್ಯಕ್ಷೆಯಾಗಿ ಪ್ರೇಮಲತಾ ರಾವ್, ಕಾರ್ಯದರ್ಶಿಯಾಗಿ ಭಗವತಿ ಕನ್ಸ್ಟ್ರಕ್ಷನ್ನ ಅರವಿಂದ್ ಭಗವಾನ್ ರೈ, ಕೊಶಾಧಿಕಾರಿಯಾಗಿ ಪರಿವಾರ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ.ಪಿ, ಸತತ ಎರಡನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ.
ಐಪಿಪಿಯಾಗಿ ಸದಾಶಿವ ಟಿ. ಉಪಾಧ್ಯಕ್ಷರುಗಳಾಗಿ ನಾರಾಯಣ ಗೌಡ, ಆನಂದ ಆಚಾರ್ಯ ಮಂಜುನಾಥ ಗೌಡ ಜೊತೆಕಾರ್ಯದರ್ಶಿಯಾಗಿ ಅಜಿತ್ ಕುಮಾರ್ ಶೆಟ್ಟಿ,ಮೆಂಬರ್ ಶಿಪ್ ಕಮಿಟಿ ನಿರ್ದೇಶಕರಾಗಿ ಸದಾನಂದ ಶೆಟ್ಟಿ, ಚೇರ್ ಪರ್ಸನ್ ಆಗಿ ಕೃಷ್ಣ ಪ್ರಶಾಂತ್ ಕೆ. ಸರ್ವಿಸ್ ಎಕ್ಟಿವಿಟಿ ನಿರ್ದೇಶಕರಾಗಿ ಶಿವಪ್ರಸಾದ್ ಶೆಟ್ಟಿ, ಕ್ಲಬ್ ಪಿಆರ್ಒ ಆಗಿ ವಿಶ್ವನಾಥ್ ಗೌಡ,ಟೈಲ್ ಟ್ವಿಸ್ಟರ್ ಆಗಿ ನಯನಾ ರೈ, ಲಯನ್ ಟಾಮರ್ ಅಗಿ ಬಾಬು ನಾೖಕ್ , ಆಡಳಿತ ಮಂಡಳಿ ನಿರ್ದೆಶಕರಾಗಿ ಸುಬ್ರಹ್ಮಣ್ಯ ಕೊಳತ್ತಾಯ,ಮುಳಿಯ ಶ್ಯಾಮ್ ಭಟ್, ಡಾ.ಎ.ಕೆ.ರೈ,ಸುದರ್ಶನ್ ಪಡಿಯಾರ್, ದಿನೇಶ್ ಪಿ,ವಿ.,ಹರಿನಾರಾಯಣ ಹೊಳ್ಳ,ಆನಂದ ರೈ, ಎಂ.ಜಿ.ರಜಾಕ್, ಸುಂದರ ಗೌಡ,ಗಣೇಶ್ ಶೆಟ್ಟಿ,ವತ್ಸಲಾ ರಾಜ್ಞಿ, ಜಯಶ್ರೀ ಶೆಟ್ಟಿ,ಶಾರದಾ ಕೇಶವ್ ಆಯ್ಕಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೇಮಲತಾ ರಾವ್ ಬೊಳ್ವಾರು ನಿವಾಸಿಯಾಗಿದ್ದು 1987 ರಲ್ಲಿ ಲಯನ್ಸ್ ಸಂಸ್ಥೆಗೆ ಸೇರ್ಪಡೆಗೊಂಡು ಅಧ್ಯಕ್ಷೆಯಾಗಿ,ಜಿಲ್ಲಾಧ್ಯಕ್ಷೆಯಾಗಿ ಹೀಗೆ ವಿವಿಧ ಹುದ್ದೆಯನ್ನು ಆಲಂಕರಿಸಿದವರು.2010-11 ನೇ ಸಾಲಿನ ಲಯನ್ಸ್ ಎಚೀವ್ಮೆಂಟ್ ಅವಾರ್ಡ್ನ್ನು ಸ್ವೀಕರಿಸಿದ್ದಾರೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕ್ರತಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹಲವಾರು ಪ್ರಶಸ್ತಿ, ಸನ್ಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಇವರ ಪತಿ ಟಿ. ರಂಗನಾಥ ರಾವ್ ನಿವೃತ್ತ ಟೆಲಿಕಂ ಇಂಜಿನಿಯರ್.
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅರವಿಂದ್ ಭಗವಾನ್ ರೈ ಪುತ್ತೂರಿನ ಸಿದ್ಯಾಳ ನಿವಾಸಿಯಾಗಿದ್ದು ಸುಮಾರು 15 ವರ್ಷಗಳಿಂದ ಅಂತರಾಷ್ಟ್ರೀಯ ಲಯನ್ ಸಂಸ್ಥೆಯ ಸದಸ್ಯರಾಗಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡ ಇವರು ವೈಟ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ಪುರಸ್ಕ್ರತರು. ಪುತ್ತೂರು ಛೇಂಬರ್ ಆಫ್ ಕಾಮರ್ಸ್ನ ಪ್ರಧಾನ ಕಾರ್ಯದರ್ಶಿಯಾಗಿರುವ ಇವರು ಉತ್ತಮ ಕೃಷಿಕರಾಗಿದ್ದು. ಭಗವತಿ ಕ್ರೆಡಿಟ್ ಫೈನಾನ್ಸ್ ಹಾಗೂ ಭಗವತಿ ಕನ್ಸ್ಟ್ರಕ್ಷನ್ ಸಂಸ್ಥೆಯನ್ನು ನಡೆಸಿಕೊಂಡು ಬರುತಿದ್ದಾರೆ.
ನೂತನ ಕೊಶಾಧಿಕಾರಿಯಾಗಿ ಆಯ್ಕೆಯಾದ ಸುಧಾಕರ ಕೆ.ಪಿ, ಪುತ್ತೂರಿನ ಕಲ್ಲಿಮಾರ್ ನಿವಾಸಿ. ಪರಿವಾರ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಹಲವಾರು ಸಾಮಾಜಿಕ, ಧಾರ್ಮಿಕ,ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಉತ್ತಮ ಸಂಘಟಕ,ಸಮಾಜ ಸೇವಕ.ಇವರು ಪರಿವಾರ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.
ನಾಳೆ ಪದಪ್ರಧಾನ ಸಮಾರಂಭ
ಕ್ಲಬ್ನ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭವು ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಜು.8 ಸಂಜೆ 7 ಗಂಟೆಗೆ ನಡೆಯಲಿದೆ. ಲಯನ್ಸ್ ಕ್ಲಬ್ ಮಂಗಳೂರಿನ ಅಧ್ಯಕ್ಷರಾದ ಲ.ಜಯರಾಜ್ ಪ್ರಕಾಶ್ ರವರು ನೂತನ ಪದಾಧಿಕಾರಿಗಳಿಗೆ ಪದಪ್ರಧಾನವನ್ನು ನೆರವೇರಿಸಲಿದ್ದಾರೆ ಎಂದು ಲಯನ್ಸ್ ಕ್ಲಬ್ ಪುತ್ತೂರಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.