ಪುತ್ತೂರು: ಕುರಿಯ ಗ್ರಾಮದ ಅಮ್ಮುಂಜ ಪಾಲಿಂಜೆ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ 2025-26ನೇ ಸಾಲಿನ ವರಮಹಾಲಕ್ಷ್ಮೀ ಪೂಜಾ ಸಮಿತಿಯ ರಚನೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜರವರ ಅಧ್ಯಕ್ಷತೆಯಲ್ಲಿ ಜು.6 ರಂದು ಜರಗಿತು.

ಗೌರವಾಧ್ಯಕ್ಷರಾಗಿ ಗೀತಾ ಪುಂಡರೀಕ, ಅಧ್ಯಕ್ಷರಾಗಿ ಶ್ವೇತಾ ರಿತೇಶ್ ರೈ ಸಂಪ್ಯದಮೂಲೆ, ಕಾರ್ಯದರ್ಶಿಯಾಗಿ ಅಂಜಲಿ ದಿನೇಶ್ ಗೌಡ ಡೆಮ್ಮಲೆ, ಕೋಶಾಧಿಕಾರಿಯಾಗಿ ಯಶೋಧ ಚಂದ್ರ ನಾಯ್ಕ ಅಮ್ಮುಂಜ, ಸದಸ್ಯರುಗಳಾಗಿ ಸುಜಾತ ಜಯಶಂಕರ್ ರೈ, ಸುಮಿತ್ರಾ ವಿಶ್ವಜಿತ್ ಅಮ್ಮುಂಜ, ಆಶಾ ರಾಜೇಶ್ ರೈ ಸಂಪ್ಯದಮೂಲೆ, ರೇವತಿ ರಾಮಣ್ಣ ನಾಯ್ಕ ಅಮ್ಮುಂಜ, ವನಿತಾ ರೇಖನಾಥ್ ರೈ ಸಂಪ್ಯದಮೂಲೆ, ಮಾಲಿನಿ ಜಯರಾಮ್ ಹೆಗ್ಡೆ ಅಮ್ಮುಂಜ, ಜಯಲಕ್ಷ್ಮಿ ಜಗನ್ನಾಥ ಶೆಟ್ಟಿ ಅಮ್ಮುಂಜ, ಹೇಮಾ ವಿಶ್ವನಾಥ ನಾಯ್ಕ ಅಮ್ಮುಂಜ, ಸುಮಿತ್ರಾ ವಿಠಲ ಗೌಡ ಅಮ್ಮುಂಜ, ಪ್ರೇಮಾ ಹೊನ್ನಪ್ಪ ನಾಯ್ಕ ಅಮ್ಮುಂಜರವರು ಆಯ್ಕೆಯಾಗಿರುತ್ತಾರೆ.