ಪುತ್ತೂರು:ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಶುಮಂದಿರದ ಪೋಷಕರ ಸಭೆ ನಡೆಯಿತು. ಸಭೆಯಲ್ಲಿ ಮಕ್ಕಳ ಚಟುವಟಿಕಾತ್ಮಕ ಕಲಿಕೆಯ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಪೋಷಕರಿಗೆ ಕರಕುಶಲ ವಿಕಾಸದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಯಿತು.
ಮುಖ್ಯಗುರು ಆಶಾ ಬೆಳ್ಳಾರೆ ಮಾತನಾಡಿ, ಮಕ್ಕಳು ಕಣ್ಣಿನಿಂದ ಕೇಳುತ್ತಾರೆ ಅವರ ಬೌದ್ಧಿಕ, ಮಾನಸಿಕ ಶಾರೀರಿಕ ಕ್ಷಮತೆಯು ಕಲಿಕೆಯನ್ನು ಗಟ್ಟಿಗೊಳಿಸುತ್ತದೆ ಎಂದರು.

ಶಾಲಾ ಅಧ್ಯಕ್ಷ ರಮೇಶ್ಚಂದ್ರ ಪಂಚಕೋಶಗಳ ವಿಕಾಸಕ್ಕನುಗುಣವಾದ ಚಟುವಟಿಕಾತ್ಮಕ ಪಠ್ಯವಸ್ತುಗಳನ್ನು ಜೋಡಿಸಿಕೊಂಡಿರುವ ಬಗ್ಗೆ ತಿಳಿಸುತ್ತಾ ಪೋಷಕರು ಮಕ್ಕಳನ್ನು ಮನೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾದ ಅಗತ್ಯತೆಗಳನ್ನು ತಿಳಿಸಿದರು.
ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ನಳಿನಿ ವಾಗ್ಲೆ ಇವರು ಉಪಸ್ಥಿತರಿದ್ದರು. ಶಿಶುಮಂದಿರದ ಸಹಶಿಕ್ಷಕರಾದ ನಮಿತಾ ಹಾಗೂ ಅನುರಾಧ ಇವರು ಸಯೋಜಕರಾಗಿ ಸಭೆ ನಿರ್ವಹಿಸಿದರು.