ಕಡಬ: 2024-25ನೇ ಸಾಲಿನಲ್ಲಿ ಒಟ್ಟು ಬೇಡಿಕೆ ಮೊತ್ತ ರೂ.10,07,338 ರಲ್ಲಿ ರೂ. 9,72,823 ವಸೂಲು ಮಾಡಿ ತೆರಿಗೆ ವಸೂಲಾತಿಯಲ್ಲಿ ತಾಲೂಕಿನಲ್ಲಿಯೇ ದ್ವಿತೀಯ ಸ್ಥಾನ ಪಡೆದ ಗ್ರಾಮ ಪಂಚಾಯತ್ ಕೊಂಬಾರು ಇದರ ಆಡಳಿತ ಮಂಡಳಿ, ಪಿ.ಡಿ.ಓ. ಮತ್ತು ಸಿಬ್ಬಂದಿಗಳನ್ನು ಜೂನ್ 24ರಂದು ತಾಲೂಕು ಪಂಚಾಯತ್ ಕಡಬದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ದ.ಕ.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಇವರು ಗೌರವ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸತತ 5 ವರ್ಷಗಳಲ್ಲಿ ರೂ. 16.25 ಲಕ್ಷದಲ್ಲಿ ರಾಜೀವಗಾಂಧೀ ಸೇವಾ ಕೇಂದ್ರ ಕಟ್ಟಡ, ರೂ. 4.21250 ಲಕ್ಷ ಅನುದಾನದಲ್ಲಿ ಗ್ರಾಮ ಪಂಚಾಯತ್ ಕಛೇರಿ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ರೂ. 8.50 ಲಕ್ಷದಲ್ಲಿ ಸ್ಮಶಾನ ಕಟ್ಟಡ, ರೂ. 18.00 ಲಕ್ಷದಲ್ಲಿ ಸಂಜೀವಿನಿ ಕಟ್ಟಡ, ರೂ. 16.37 ಲಕ್ಷದಲ್ಲಿ ಘನತ್ಯಾಜ್ಯ ಘಟಕ ದ.ಕ.ಜಿ.ಪಂ. ಉ.ಹಿ.ಪ್ರಾ ಶಾಲೆ ಕೊಂಬಾರು-ಬೋಳ್ನಡ್ಕ ಇಲ್ಲಿಗೆ ನರೇಗಾ ರೂ. 4.50 ಲಕ್ಷದಲ್ಲಿ ಸುಸಜ್ಜಿತ ಶೌಚಾಲಯ ರಚನೆ, ತಲಾ ರೂ. 3.50 ಲಕ್ಷ ಅನುದಾನದಲ್ಲಿ 2 ಕಿಂಡಿ ಅಣೆಕಟ್ಟು, ತಲಾ ರೂ. 3.80 ಲಕ್ಷ ಅನುದಾನದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ 4 ಶಾಲೆಗಳಿಗೆ ಆವರಣ ಗೋಡೆ ಕಾಮಗಾರಿಯನ್ನು ಹಿಂದಿನ ಆಡಳಿತ ಮಂಡಳಿ ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ನಿರ್ವಹಿಸಿ ತಾಲೂಕಿನಲ್ಲಿಯೇ ಕ್ರಿಯಾಶೀಲ ಪಂಚಾಯತ್ ಅಭಿವೃದ್ದಿ ಅಧಿಕಾರಿ ಎಂಬ ಗೌರವವನ್ನು ಸಹಿತ ಕೊಂಬಾರು ಗ್ರಾಮ ಪಂಚಾಯತ್ ಪ್ರಭಾರ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಘವೇಂದ್ರ ಗೌಡ ಇವರಿಗೆ ದಿನಾಂಕ ಜೂನ್ 24ರಂದು ತಾಲೂಕು ಪಂಚಾಯತ್ ಕಡಬ ಇಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ದ.ಕ.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಮತ್ತು ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.