ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಹಾಗೂ ರೋಟರ್ಯಾಕ್ಟ್ ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜು ಇದರ ಪದಸ್ವೀಕಾರ ಸಮಾರಂಭ ಜು.6ರಂದು ತೆಂಕಿಲ ಚುಂಚಶ್ರೀ ಸಭಾಭವನದಲ್ಲಿ ನಡೆಯಿತು.
ಪದಪ್ರದಾನ ಮಾಡಿ ಮಾತನಾಡಿದ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀಪ್ರಕಾಶ್, ನಾವು ಮಾಡುವ ಕಾಯಕದಲ್ಲಿ ನಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಬೇಕು. ಇದರಿಂದ ಆ ಕೆಲಸದ ಉದ್ದೇಶ ಈಡೇರುತ್ತದೆ ಎಂದರು.
ಪುತ್ತೂರು ರೋಟರಿ ಕ್ಲಬ್ ಕಾರ್ಯದರ್ಶಿ ಸುಬ್ಬಪ್ಪ ಕೈಕಂಬ ಮಾತನಾಡಿ, ಯುವಕರು ನಡೆಸಿಕೊಡುವ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲೊ ಕೌಶಲ್ಯವನ್ನು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭ ವೈದ್ಯ ಡಾ. ಶ್ಯಾಮ್ ಹಾಗೂ ಪುತ್ತೂರು ರೋಟರಿ ಕ್ಲಬ್ ಯುವಜನ ಸೇವಾ ನಿರ್ದೇಶಕ ಸುಜಿತ್ ಡಿ. ರೈ ಅವರನ್ನು ಸನ್ಮಾನಿಸಲಾಯಿತು. ವಿಶೇಷ ಚೇತನರಿಗೆ ಸಾಧನಾ ಸಲಕರಣೆ ಹಾಗೂ ಅಂಗನವಾಡಿ ಪುಟಾಣಿಗಳಿಗೆ ಪಾದರಕ್ಷೆಯನ್ನು ವಿತರಿಸಲಾಯಿತು. 11 ಮಂದಿ ನೂತನ ಸದಸ್ಯರನ್ನು ಕ್ಲಬ್ಬಿಗೆ ಸೇರ್ಪಡೆಗೊಳಿಸಲಾಯಿತು.
ಬುಲೆಟಿನ್ ಗೆ ಸಹಕರಿಸಿದ ಪ್ರಾಯೋಜಕರನ್ನು ಗುರುತಿಸಲಾಯಿತು.
ನೂತನ ಸಭಾಪತಿಗಳಾದ ಕಿಶನ್ ಬಿ.ವಿ. ಹಾಗೂ ಪ್ರೀತಾ ಹೆಗ್ಡೆ, ನಿರ್ಗಮಿತ ಸಭಾಪತಿ ಶ್ರೀಧರ್ ಆಚಾರ್ಯ ಶುಭಹಾರೈಸಿದರು.
ರೋಟರ್ಯಾಕ್ಟ್ ಪ್ರಗತಿ ಪ್ಯಾರಾ ಮಡಿಕಲ್ ನ ಸದಸ್ಯೆಯರಾದ ಪೂಜಾ, ಚೈತ್ರ, ಅಭಿಜ್ಞಾ, ದೀಕ್ಷಾಯಣಿ ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷ ಸುಬ್ರಮಣಿ ಪಿ.ವಿ. ಸ್ವಾಗತಿಸಿದರು. ನಿರ್ಗಮಿತ ಕಾರ್ಯದರ್ಶಿಗಳಾದ ವಿಶಾಲ್ ಹಾಗೂ ಸಿಂಚನಾ ವರದಿ ವಾಚಿಸಿದರು. ಕಾರ್ಯದರ್ಶಿ ದಿವ್ಯಾ ವಂದಿಸಿದರು. ಶಶಿಧರ್ ಕೆ. ಮಾವಿನಕಟ್ಟೆ ಹಾಗೂ ಗಣೇಶ್ ಎನ್. ಕಲ್ಲರ್ಪೆ ಕಾರ್ಯಕ್ರಮ ನಿರೂಪಿಸಿದರು.