ಪುತ್ತೂರು: ‘ನೆಟ್ ವರ್ಕ್ ಸರಿ ತಿಕ್ಕುಜಿ’ ಎನ್ನುತ್ತಾ ನೆಟ್ ವರ್ಕ್ ಸಮಸ್ಯೆಯಿಂದಾಗಿ ಜನ ಸಂಕಷ್ಟಪಡುತ್ತಿರುವ ಘಟನೆ ಅರಿಯಡ್ಕ ಗ್ರಾಮದ ಪಯಂದೂರು, ಜಾರತ್ತಾರು ಸಮೀಪ ನಡೆದಿದೆ.
ಶೇಖಮಲೆ ಶಾಲೆಯ ಸಮೀಪವಿರುವ ಏರ್ಟೆಲ್ ಟವರ್ ನಲ್ಲಿ ಸರಿಯಾಗಿ ನೆಟ್ ವರ್ಕ್ ಸಿಗುತ್ತಿಲ್ಲವೆಂಬುದು ಅರಿಯಡ್ಕ ಗ್ರಾಮದ ಪಯಂದೂರು, ಜಾರತ್ತಾರು ನಿವಾಸಿಗಳ ಆರೋಪವಾಗಿದೆ.
ಸರಿಯಾಗಿ ಫೋನ್ ಕರೆ ಮಾಡಲು, ಸ್ವೀಕರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ.