ಪುತ್ತೂರು: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೆಸರರಾದ ಮೇನಾಲ ಏಲ್ನಾಡುಗುತ್ತು ದಿ. ಜಲಧರ ಶೆಟ್ಟಿಯವರ ಪತ್ನಿ ಸರೋಜಿನಿ. ಜೆ. ಶೆಟ್ಟಿ(73) ಅಲ್ಪಕಾಲದ ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾದರು.
ಮೃತರ ಅಂತಿಮ ವಿಧಿ ವಿಧಾನಗಳು ಇಂದು ಸಂಜೆ ಗಂ.6ರ ನಂತರ ಅವರ ಸ್ವಗೃಹದಲ್ಲಿ ನೆರವೇರಲಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರು ಪುತ್ರರಾದ ಉದ್ಯಮಿ ಕಿಶನ್ ಶೆಟ್ಟಿ, ಪುತ್ರಿಯರಾದ ಭಾರತಿ ಶುಭಾಸ್ ಶೆಟ್ಟಿ, ಆರತಿ ವಿನಯ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.