ನ.1ರಿಂದ ಕೋರ್ ಮೆಗಾ ಸೇಲ್ | ಕಂಪ್ಯೂಟರ್, ಲ್ಯಾಪ್’ಟಾಪ್, ಪ್ರಿಂಟರ್ ಖರೀದಿ ಮೇಲೆ ಆಕರ್ಷಕ ಕೊಡುಗೆಗಳು, ಲಕ್ಕಿ ಕೂಪನ್

0

ಪುತ್ತೂರು: ಮಂಗಳೂರು, ಪುತ್ತೂರು, ಸುಳ್ಯದಲ್ಲಿ ಕಚೇರಿ ಹೊಂದಿರುವ ಕೋರ್ ಟೆಕ್ನಾಲಜೀಸ್ ನವಂಬರ್ 1ರಿಂದ ಡಿಸೆಂಬರ್ 15ರವರೆಗೆ ಕೋರ್ ಮೆಗಾ ಸೇಲ್ ಆಯೋಜಿಸಿದ್ದು, ಮೆಗಾ ಸೇಲ್’ನಲ್ಲಿ ಆಕರ್ಷಕ ಕೊಡುಗೆಗಳನ್ನು ಗ್ರಾಹಕರಿಗಾಗಿ ನೀಡಲಾಗಿದೆ.

500 ರೂ. ಮೇಲ್ಪಟ್ಟ ಯಾವುದೇ ಖರೀದಿ ಮೇಲೆ ಲಕ್ಕಿ ಕೂಪನ್ ಹಾಗೂ ನಗದು ಬಹುಮಾನ ಗೆಲ್ಲುವ ಅವಕಾಶ ನೀಡಲಾಗಿದೆ. ಪ್ರಥಮ ಬಹುಮಾನವಾಗಿ 10 ಸಾವಿರ ರೂ., ದ್ವಿತೀಯ ಬಹುಮಾನವಾಗಿ 5 ಸಾವಿರ ರೂ., ತೃತೀಯ ಬಹುಮಾನವಾಗಿ 2 ಸಾವಿರ ರೂ. ನೀಡಲಾಗುವುದು.

ಯಾವುದೇ ರಿಫರ್’ಬಿಷ್ಡ್ (Refurbished) ಲ್ಯಾಪ್’ಟಾಪ್ ಖರೀದಿಗೆ 6 ವಿಶೇಷ ಗಿಫ್ಟ್’ಗಳನ್ನು ನೀಡಲಾಗುವುದು. 2999 ರೂ. ಬೆಲೆಬಾಳುವ ಕ್ಲೀನಿಂಗ್ ಕಿಟ್, ಮೌಸ್ ಪ್ಯಾಡ್, ಆ್ಯಂಟಿ ವೈರಸ್, ಬ್ಯಾಗ್, ಕೀಬೋರ್ಡ್ ಸಿಲಿಕಾನ್ ಕವರ್, ವೈರ್’ಲೆಸ್ ಮೌಸ್ ಉಚಿತವಾಗಿ ಗ್ರಾಹಕರು ಪಡೆದುಕೊಳ್ಳಲಿದ್ದಾರೆ. 12 ಸಾವಿರ ರೂ.ನಿಂದ ಪ್ರಾರಂಭವಾಗುವ ಲ್ಯಾಪ್’ಟಾಪ್’ಗಳಿಗೂ ಈ ಆಫರ್ ಅನ್ವಯವಾಗುತ್ತದೆ.

ಪ್ರಿಂಟರ್ ಖರೀದಿ ಮೇಲೆ ವಿಶೇಷ ಡಿಸ್ಕೌಂಟ್, ಕಂಪ್ಯೂಟರ್ ಅಕ್ಸಸರೀಸ್ ಖರೀದಿಗೆ ಶೇ. 10ರಷ್ಟು ಹೆಚ್ಚುವರಿ ಡಿಸ್ಕೌಂಟ್, ಯಾವುದೇ ಬ್ರಾಂಡಿನ ಹೊಸ ಲ್ಯಾಪ್’ಟಾಪ್ ಅಥವಾ ಡೆಸ್ಕ್’ಟಾಪ್ ಖರೀದಿಗೆ ಬ್ಲೂಟೂತ್ ಸ್ಪೀಕರ್ ಅನ್ನು ಉಚಿತವಾಗಿ ನೀಡಲಾಗುವುದು.

ಅಲ್ಲದೇ, ಡೆಸ್ಕ್’ಟಾಪ್ ಅಥವಾ ಲ್ಯಾಪ್’ಟಾಪ್ ಸರ್ವೀಸ್’ಗೆ 750 ರೂ. ಬೆಲೆಯ ಆ್ಯಂಟಿವೈರಸ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಮುಂಚೂಣಿಯಲ್ಲಿ ಗುರುತಿಸಿಕೊಂಡ ಸಂಸ್ಥೆ
ಕಳೆದ 10 ವರ್ಷಗಳಿಂದ ಕಂಪ್ಯೂಟರ್ ಹಾಗೂ ಐಟಿ ಉಪಕರಣಗಳ ಕ್ಷೇತ್ರದಲ್ಲಿ ಗ್ರಾಹಕರ ಪ್ರೀತಿ ಸಂಪಾದಿಸಿರುವ ಕೋರ್ ಟೆಕ್ನಾಲಜೀಸ್ ಕಂಪ್ಯೂಟರ್’ಗಳ ರೆಂಟ್, ಡೇಟಾ ರಿಕವರಿ, CCTV ಸೇಲ್ಸ್ ಮತ್ತು ಇನ್ಸ್ಟಾಲೇಶನ್, ಬಯೋಮೆಟ್ರಿಕ್ ಸಿಸ್ಟಮ್ಗಳು, ಬಿಲ್ಲಿಂಗ್ ಸಾಫ್ಟ್ವೇರ್ಗಳು, ಹೊಸ ಲ್ಯಾಪ್ಟಾಪ್ಗಳು ಮತ್ತು ಡೆಸ್ಕ್ಟಾಪ್ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

ಸಂಸ್ಥೆಯ ಶಾಖೆಗಳು
ಪುತ್ತೂರಿನಲ್ಲಿ ಕೇಂದ್ರ ಕಚೇರಿಯಲ್ಲಿ ಹೊಂದಿರುವ ಕೋರ್ ಟೆಕ್ನಾಲಜೀಸ್, ಪುತ್ತೂರು ಮುಖ್ಯರಸ್ತೆಯಲ್ಲಿ ಸಂಗೀತಾ ಮೊಬೈಲ್ಸ್ ಎದುರುಗಡೆ ಇರುವ ಮಹಲಾಸಾ ಆರ್ಕೇಡ್’ನಲ್ಲಿದೆ. ಮಂಗಳೂರಿನಲ್ಲಿ ಬೈಪಾಸ್ ರಸ್ತೆಯ ಕನಕನಾಡಿ ಗೇಟ್ ಬಿಲ್ಡಿಂಗ್’ನಲ್ಲಿದೆ. ಸುಳ್ಯದಲ್ಲಿ KSRTC ಬಸ್ ನಿಲ್ದಾಣ ಮುಂಭಾಗದಲ್ಲಿರುವ ಸೂಂತೋಡು ಎಂಪೋರಿಯಂನಲ್ಲಿದೆ.
ಸಂಪರ್ಕ ಸಂಖ್ಯೆಗಳು ಮಂಗಳೂರು – 8277834777, ಪುತ್ತೂರು – 8277227287, ಸುಳ್ಯ – 8277874777.

ಸ್ಪರ್ಧಾತ್ಮಕ ದರ
ಕೋರ್ ಟೆಕ್ನಾಲಜಿಸ್’ನ ಈ ಮೆಗಾ ಸೇಲ್, ತಂತ್ರಜ್ಞಾನ ಪ್ರಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶ. ಉತ್ತಮ ಗುಣಮಟ್ಟದ ಕಂಪ್ಯೂಟರ್ ಉಪಕರಣಗಳು, ಲ್ಯಾಪ್ಟಾಪ್ಗಳು ಮತ್ತು ಆಕ್ಸೆಸರೀಸ್ಗಳನ್ನು ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ಪಡೆಯಲು ಇದು ಅತ್ಯುತ್ತಮ ಸಮಯ.
ಅನೂಪ್ ಕೆ.ಜೆ, ಮಾಲಕರು, ಕೋರ್ ಟೆಕ್ನಾಲಜೀಸ್

LEAVE A REPLY

Please enter your comment!
Please enter your name here