ಇಡ್ಕಿದು ಸೇವಾ ಸಹಕಾರಿ‌ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ರವರಿಗೆ ಸಹಕಾರ ಸಂಘಗಳ ಒಕ್ಕೂಟದಿಂದ ಬೀಳ್ಕೊಡುಗೆ

0

ಕರ್ತವ್ಯ ವೇಳೆ ನಾವು ಮಾಡಿರುವ ಉತ್ತಮ ಸೇವೆ ಜನರಲ್ಲಿ ಅಚ್ಚಳಿಯದೆ ಉಳಿಯುತ್ತದೆ: ಟಿ.ಜಿ.ರಾಜಾರಾಮ್ ಭಟ್

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಈಶ್ವರ ನಾಯ್ಕ್ ರವರಿಗೆ ಬಂಟ್ವಾಳ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ವತಿಯಿಂದ ಬೀಳ್ಕೊಡುಗೆ ಸಮಾರಂಭ ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನ ಬಿ.ಸಿ.ರೋಡು ಶಾಖೆಯ ಸಭಾಂಗಣದಲ್ಲಿ ನಡೆಯುತು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಸಂಘಗಳು ಮಾಡಿರುವ ಪ್ರಾಮಾಣಿಕತೆ ಸೇವೆ ಹಾಗೂ ಸಾಧನೆಗಳಿಗಳಿಂದ
ಪ್ರಸಿದ್ದಿ ಪಡೆದಿವೆ. ಸಿಬ್ಬಂದಿಗಳ ನಗುಮೊಗದ ಸೇವೆ ಜೊತೆಗೆ ಪಾರದರ್ಶಕತೆ ಕಾಯ್ದುಕೊಂಡು ನೀಡಿದ ಸೇವೆಯಿಂದ ಸಹಕಾರಿ ಸಂಘಗಳು ಜಿಲ್ಲೆಯಲ್ಲಿ ವೇಗವಾಗಿ ಬೆಳೆದಿದೆ. ನಿವೃತ್ತಿ ಎಂಬುದು ನಿರಂತನ ನಡೆಯುವ ಪ್ರಕ್ರಿಯೆಯಾಗಿದ್ದು ಕರ್ತವ್ಯ ವೇಳೆ ನಾವು ಮಾಡಿರುವ ಉತ್ತಮ ಸೇವೆ ಜನರಲ್ಲಿ ಅಚ್ಚಳಿಯದೆ ಉಳಿಯುತ್ತದೆ ಎಂದರು. ಮಂಗಳೂರು ಸಹಕಾರಿ ಸಂಘಗಳ ಉಪನಿಬಂಧಕ ರಮೇಶ್.ಎಚ್.ಎನ್., ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ಡಾ ಜ್ಯೋತಿ, ಡಿಸಿಸಿ ಬ್ಯಾಂಕ್ ಬಿ.ಸಿ.ರೋಡು ಶಾಖಾ ವ್ಯವಸ್ಥಾಪಕ ಗಣೇಶ ಕಾರಂತ್, ಒಕ್ಕೂಟದ ಕಾರ್ಯದರ್ಶಿ ಅಜಯ್ ಕುಮಾರ್ ಅಜಿಲ, ಡಿ.ಸಿ.ಸಿ.ಬ್ಯಾಂಕ್ ನ ಹಿರಿಯ ಪ್ರಬಂಧಕರಾದ ಸುಜಾತ, ವಲಯ ಮೇಲ್ವಿಚಾರಕರಾದ ಯೋಗೀಶ್, ಕೀರ್ತಿರಾಜ್ ಮೊದಲಾದವರು ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷ ಜಯಪ್ರಕಾಶ್ ಕಾಮತ್ ಸ್ವಾಗತಿಸಿ, ಒಕ್ಕೂಟದ ಸದಸ್ಯ ಅಲ್ಬರ್ಟ್ ಡಿಸೋಜ ವಂದಿಸಿದರು.

1989ರಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ ಸಾಮಾನ್ಯ ನೌಕರನಾಗಿ ಸೇರಿದ ಈಶ್ವರ ನಾಯ್ಕ ರವರು ಆ ಬಳಿಕ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ, 2007ರಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಭಡ್ತಿಹೊಂದಿದ್ದರು. ಒಟ್ಟು 36 ವರುಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತಿಹೊಂದಿದ್ದಾರೆ. ಇವರು ಸುಮಾರು ಹದಿನೈದು ವರುಷಗಳಿಂದ ಬಂಟ್ವಾಳ ತಾಲೂಕಿನ ಫ್ಯಾಕ್ಸ್ ಒಕ್ಕೂಟದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here