ಅರಣ್ಯ ಇಲಾಖೆ ಸುಪರ್ದಿಗೆಯಲ್ಲಿ ಪಶು ಇಲಾಖೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರು ಆಸ್ಪತ್ರೆಗೆ ಶಿಫ್ಟ್
ಪುತ್ತೂರು: ನಾಡಿಗೆ ಬಂದ ಮರ್ಕಟನಿಗೆ ಕಾಲೇಜು ವಿದ್ಯಾರ್ಥಿ ಮತ್ತು ಸಾರ್ವಜನಿಕರು ರಕ್ಷಣೆ ನೀಡಿದ ಘಟನೆ ಅ.24ರಂದು ಪುತ್ತೂರು ಕೋರ್ಟ್ ರಸ್ತೆಯ ಬಳಿ ನಡೆದಿದೆ.

ಗಾಯಾಳು ಮರ್ಕಟವನ್ನು ಅರಣ್ಯ ಇಲಾಖೆಯ ಸುಪರ್ದಿಗೆಯಲ್ಲಿ ಪುತ್ತೂರು ಪಶು ಇಲಾಖೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಜಿಡೆಕಲ್ಲು ಪದವಿ ಕಾಲೇಜಿನ ಚಂದನ್ ಅವರು ಕಾಲೇಜಿಗೆ ಹೋಗುವ ಸಂದರ್ಭ ಕೋರ್ಟ್ ರಸ್ತೆ ಬಳಿ ಶ್ವಾನಗಳ ದಾಳಿಗೆ ಮರ್ಕಟದ ಕುತ್ತಿಗೆ ಬಳಿ ಗಂಭೀರ ಗಾಯವಾಗಿತ್ತು. ಮರ್ಕಟ ಗಾಯಗೊಂಡು ಅಸ್ವಸ್ಥಗೊಂಡಿರುವುದನ್ನು ಕಂಡು ಚಂದನ್ ಅವರು ಅದರ ಆರೈಕೆಗೆ ಮುಂದಾದರು. ಈ ವೇಳೆ ರಿಕ್ಷಾ ಚಾಲಕ ಶಿವಪ್ಪ ಮತ್ತು ಜಗದೀಶ್ ರೈ ಮರ್ಕಟನ ಆರೈಕೆಗೆ ವಿದ್ಯಾರ್ಥಿ ಜೊತೆ ಸೇರಿದರು. ಬಳಿಕ ಪಶು ಇಲಾಖೆಯ ವೈದ್ಯರ ಸೂಚನೆಯಂತೆ ಅರಣ್ಯ ಇಲಾಖೆಗೆ ಬಂದು ಅಲ್ಲಿಂದ ಅರಣ್ಯಾ ಇಲಾಖೆಯ ಅಧಿಕಾರಿಯೊಂದಿಗೆ ಪಶು ಇಲಾಖೆಗೆ ಹೋಗಿ ಅಲ್ಲಿ ಡಾ.ಧರ್ಮಪಾಲ ಅವರ ಮೂಲಕ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಅರಣ್ಯ ಇಲಾಖೆಯ ಉಲ್ಲಾಸ್, ಸುಧೀರ್ ಹೆಗ್ಡೆ, ಉರಗ ತಜ್ಞ ತೇಜಸ್ ಅವರು ಮಂಗಳೂರು ಇಲಾಖೆಯ ಪಶುವೈದ್ಯ ಅಶ್ವಿನ್ ಅವರ ಬಳಿಗೆ ಕರೆದೊಯ್ದರು.
ಮರ್ಕಟನ ರಕ್ಷಣೆ ವೇಳೆ ವಿದ್ಯಾರ್ಥಿ ಚಂದನ್ ಅವರ ಕೈಗೆ ಮರ್ಕಟ ಕಚ್ಚಿದ್ದು, ಗಾಯಗೊಂಡ ವಿದ್ಯಾರ್ಥಿಗೆ ಟಿ.ಟಿ ಕೊಡಿಸಲಾಗಿದೆ.