ಪುತ್ತೂರು: ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿರುವ ಜೆಸಿಐ ಪುತ್ತೂರು ಹಾಗೂ TATA AIA ಸಂಸ್ಥೆಯ ಇದರ ಸಹಯೋಗದೊಂದಿಗೆ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯಲ್ಲಿ ವ್ಯವಹಾರ ಪ್ರೇರಣಾ ತರಬೇತಿಯು ಜು.8ರಂದು ನಡೆಯಿತು.

ಅಧ್ಯಕ್ಷತೆ ವಹಿಸಿದ ಜೆಸಿಐ ಪುತ್ತೂರು ಘಟಕದ ಅಧ್ಯಕ್ಷ ಭಾಗ್ಯೇಶ್ ರೈ ರವರು ಶಿಬಿರಾರ್ಥಿಗಳಿಗೆ ಶುಭವನ್ನು ಹಾರೈಸಿದರು. ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ TATA AIA ಇದರ ಮ್ಯಾನೇಜರ್ ಜಾಲ್ಸನ್ ಮನೋಜ್, ಪದ್ಮಶ್ರೀ ಗ್ರೂಪ್ಸ್ ನ ಮಾಲಿಕರಾದ ರತ್ನಾಕರ್ ರೈ, TATA AIA ಸಂಸ್ಥೆಯ ರಾಘವೇಂದ್ರ ನಾಯಕ್ ರವರು ಆಗಮಿಸಿ ಶಿಬಿರಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.