ಪುತ್ತೂರು: ಭಾರತೀಯ ಚಾರ್ಟರ್ಡ್ ಎಕೌಂಟೆಂಟ್ಸ್ ಸಂಸ್ಥೆ (ಐಸಿಎಐ)ಯು 2025ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕುರಿಯ ಗ್ರಾಮದ ಕೊಡ್ಲಾರು ನಿವಾಸಿ ಅಂಕಿತ್ ಎನ್ .ಕೆ ಉತ್ತೀರ್ಣರಾಗಿರುತ್ತಾರೆ. ಇವರು ಕೊಡ್ಲಾರು ನಾಗೇಶ್ ನಕ್ಷತ್ರಿತ್ತಾಯ ಮತ್ತು ವೃಂದಾ ಕೊಡ್ಲಾರುರವರ ಪುತ್ರನಾಗಿದ್ದು, ಅಂಕಿತ್ ಎನ್.ಕೆ ರವರು ತಮ್ಮ ವಿದ್ಯಾಭ್ಯಾಸವನ್ನು ಪುತ್ತೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿದ್ದು, ಮಂಗಳೂರಿನಲ್ಲಿರುವ ಸಿ.ಎ, ಸುಬ್ರಾಯ ಎಡಪಡಿತ್ತಾಯ ಅವರಲ್ಲಿ ಆರ್ಟಿಕಲ್ ಶಿಪ್ ಮಾಡಿದ್ದು, ಸದ್ಯ ಅಲ್ಲಿಯೇ ತಮ್ಮ ಉದ್ಯೋಗವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇವರು ನಿವೃತ್ತ ಶಿಕ್ಷಕ ಪದ್ಮನಾಭ ನಕ್ಷತ್ರಿತ್ತಾಯ ಕೊಡ್ಲಾರು ಇವರ ಮೊಮ್ಮಗನಾಗಿದ್ದು ಹಾಗೂ ಇವರ ಸಹೋದರ ಚೈತನ್ಯ ಎನ್.ಕೆ ರವರು ಬೆಂಗಳೂರಿನಲ್ಲಿ ಇಂಜಿನಿಯರ್ ವೃತ್ತಿಯಲ್ಲಿದ್ದಾರೆ.
