ರೋಟರಿ ಪುತ್ತೂರು ಸೆಂಟ್ರಲ್ ಪದ ಪ್ರದಾನ

0

ವಿಶ್ವಶಾಂತಿಗಾಗಿ ರೋಟರಿಯಿಂದ ಸೇವೆ ಆರಂಭ-ಡಾ.ಭಾಸ್ಕರ್

ಪುತ್ತೂರು: ಸೇವೆ ಅನ್ನುವುದು ಈ ಜಗತ್ತಿನಲ್ಲಿ ಬದುಕಿದ್ದಾಗ ನೀಡುವ ಬಾಡಿಗೆಯಾಗಿದೆ. ವಿವಿಧ ಕಾರಣಗಳಿಗಾಗಿ ಇಂದು ವಿಶ್ವದೆಲ್ಲೆಡೆ ರಾಷ್ಟ್ರಗಳ ಮಧ್ಯೆ ಯುದ್ಧಗಳು ಆಗುತ್ತಿರುವುದು ಖೇದಕರ. ಜಗತ್ತಿನಲ್ಲಿ ಅಂದು ಪೋಲಿಯೊ ನಿರ್ಮೂಲನೆಗೆ ರೋಟರಿ ಹೆಜ್ಜೆಯಿಟ್ಟಿದ್ದರಿಂದ ಹಲವಾರು ವರ್ಷಗಳ ಬಳಿಕ ಶೇ.99 ರಷ್ಟು ಪೋಲಿಯೊ ನಿರ್ಮೂಲನೆಯಾಗಿದೆ. ಪ್ರಸ್ತುತ ರೋಟರಿ ಸಂಸ್ಥೆಯು ಶಾಂತಿಗಾಗಿ ಜಗತ್ತಿನೆಲ್ಲೆಡೆ ಶಾಂತಿ ಕೇಂದ್ರವನ್ನು ಸ್ಥಾಪಿಸುತ್ತಿದ್ದು ಭಾರತದಲ್ಲೂ ಈ ಕೇಂದ್ರ ಆರಂಭವಾಗಿದೆ. ಹೇಗೆ ಪೋಲಿಯೊ ನಿರ್ಮೂಲನೆವಾಗಿದೆಯೋ ಈ ಶಾಂತಿ ಕೇಂದ್ರವು ರೂಟ್ ಲೆವೆಲ್ ನಲ್ಲಿ ಕಾರ್ಯ ಮಾಡಿದಾಗ ಮುಂದಿನ ವರ್ಷಗಳಲ್ಲಿ ವಿಶ್ವದಲ್ಲಿ ಯುದ್ಧಗಳಾಗದೆ ಶಾಂತಿ ಸ್ಥಾಪನೆಯಾಗವಹುದು ಎಂದು ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3180 ಇದರ ಪಿಡಿಜಿ ಡಾ.ಭಾಸ್ಕರ್ ಎಸ್ ರವರು ಹೇಳಿದರು.

ಸೇವೆಯಿಂದ ಸಮಾಜದಲ್ಲಿ ಇಂಪ್ಯಾಕ್ಟ್-ಬಾಲಕೃಷ್ಣ ಪೈ

ರೋಟರಿ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈರವರು ಕ್ಲಬ್ ಬುಲೆಟಿನ್ ಬಿಡುಗಡೆಗೊಳಿಸಿ ಮಾತನಾಡಿ, ರೋಟರಿ ಆಸ್ತಿ ಅದರ ಸದಸ್ಯರು. ಒಳ್ಳೆಯ ಕಾರ್ಯಗಳಿಗೆ ಒಂದಾಗಬೇಕಾದರೆ ನಮ್ಮಲ್ಲಿ ಬೆಳವಣಿಗೆ ಅಗತ್ಯವಾಗಿದೆ. ಬೆಳವಣಿಗೆಯಾಗಬೇಕಾದರೆ ಪರಸ್ಪರ ಸಂಪರ್ಕದ ಅಗತ್ಯವಿದೆ. ಪರಸ್ಪರ ಸಂಪರ್ಕವಿದ್ದಾಗ ಸೇವೆ ಎಂಬುದು ನಿರಂತರತೆಯನ್ನು ಪಡೆದುಕೊಳ್ಳುತ್ತದೆ ಮಾತ್ರವಲ್ಲ ಇದು ಸಮಾಜದಲ್ಲಿ ಇಂಪ್ಯಾಕ್ಟ್ ಆಗಬಲ್ಲುದು ಎಂದರು.

ಅಧ್ಯಕ್ಷ ಚಂದ್ರಹಾಸ ರೈರವರಿಗೆ ಕಾರ್ಯ ಯಶಸ್ವಿಯಾಗಲಿ-ಉಮಾನಾಥ್ ಪಿ.ಬಿ

ರೋಟರಿ ವಲಯ ಸೇನಾನಿ ಉಮಾನಾಥ್ ಪಿ. ಬಿ ಮಾತನಾಡಿ, ಕಳೆದ ವರ್ಷ ಅಧ್ಯಕ್ಷರಾದ ಪಿ.ಎಂ ಅಶ್ರಫ್ ರವರು ಅಚ್ಚುಕಟ್ಟಾಗಿ ವರ್ಷವನ್ನು ಯಶಸ್ವಿಯಾಗಿಸಿರುವುದಕ್ಕೆ ಅಭಿನಂದನೆಗಳು. ಅಧಿಕಾರ ಸ್ವೀಕರಿಸಿದ ಅಧ್ಯಕ್ಷರಾಗಿರುವ ಚಂದ್ರಹಾಸ ರೈರವರು ಜೇಸಿ ಸಂಸ್ಥೆಯಲ್ಲಿ ಗುರುತಿಸಿಕೊಂಡು ಅನುಭವಿರುವುದರಿಂದ ರೋಟರಿ ಸಂಸ್ಥೆಯನ್ನು ಮುನ್ನಡೆಸಲು ಕಷ್ಟವಾಗದು, ಶುಭಾಶಯಗಳು ಎಂದರು.

ಜವಾಬ್ದಾರಿ ಹುದ್ದೆ ನಿರ್ವಹಿಸಿ ತೃಪ್ತಿಯೊಂದಿಗೆ ನಿರ್ಗಮಿಸುತ್ರಿದ್ದೇನೆ-ಪಿ.ಎಂ ಅಶ್ರಫ್

ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನಿಕಟಪೂರ್ವ ಅಧ್ಯಕ್ಷ ಪಿ.ಎಂ ಅಶ್ರಫ್ ಮಾತನಾಡಿ, ಕ್ಲಬ್ ಅಧ್ಯಕ್ಷನಾಗಿ ಹುದ್ದೆ ಅಲಂಕರಿಸಿದ ಸಂದರ್ಭದಲ್ಲಿ ಇದು ಹುದ್ದೆ ಅಲ್ಲ, ಇದು ಜವಾಬ್ದಾರಿ ಎಂದು ಹೇಳಿದ್ದೆ. ಅಧ್ಯಕ್ಷನಾಗಿ ಒಂದು ವರ್ಷದ ಈ ಜವಾಬ್ದಾರಿ ಹುದ್ದೆಯನ್ನು ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ಪೂರೈಸಿದ್ದೇನೆ ಎಂಬ ತೃಪ್ತಿಯೊಂದಿಗೆ ನಿರ್ಗಮಿಸುತ್ತಿದ್ದೇನೆ. ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ಕ್ಲಬ್ ಗೆ ಡೈಮಂಡ್ ಪ್ರಶಸ್ತಿ ದಕ್ಕಿರುವುದು ಹೆಮ್ಮೆಯ ವಿಷಯ ಎಂದರು.

ಕ್ಲಬ್ ಪ್ರತೀ ಚಟುವಟಿಕೆಗಳಲ್ಲಿ ಸ್ವರ್ಣ ಕ್ಲಬ್ ಪ್ರೋತ್ಸಾಹವಿದೆ-ಸುಭಾಷ್ ರೈ

ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ಸುಭಾಷ್ ರೈ ಬೆಳ್ಳಿಪ್ಪಾಡಿ ಮಾತನಾಡಿ, ಕಳೆದ ಸಾಲಿನಲ್ಲಿ ಅತ್ತ್ಯುತ್ತಮ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಡೈಮಂಡ್ ಪ್ರಶಸ್ತಿಗೆ ಭಾಜನರಾದ ಸೆಂಟ್ರಲ್ ಕ್ಲಬ್ ಗೆ ಅಭಿನಂದನೆಗಳೊಂದಿಗೆ ನೂತನ ತಂಡದೊಂದಿಗೆ ಪ್ರಸ್ತುತ ವರ್ಷ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಗಳಿಗೆ ನಮ್ಮ ಪ್ರೋತ್ಸಾಹ ಇದೆ ಎಂದರು.

ನೂತನ ಸದಸ್ಯರ ಸೇರ್ಪಡೆ

ಕ್ಲಬ್ ಸರ್ವಿಸ್ ನಡಿಯಲ್ಲಿ ತೀರ್ಥಹಳ್ಳಿ ಬ್ಯಾಂಕಿನಲ್ಲಿ ಪ್ರಬಂಧಕರಾಗಿ ನಿವೃತ್ತರಾದ ಈಶ್ವರ್ ನಾಯ್ಕ್ ಕಾಟುಕುಕ್ಕೆ, ಪ್ರಗತಿಪರ ಕೃಷಿಕರು ವೀಣಾ ಪಿ.ಎಸ್ ಶೆಟ್ಟಿ ಬೊಳ್ವಾರು, ನೂತನ ಅಧ್ಯಕ್ಷ ಚಂದ್ರಹಾಸ ರೈರವರ ಸಹೋದರನ ಪುತ್ರ ಪ್ರಣೀತ್ ರೈ ಬಿ.ರವರುಗಳಿಗೆ ರೋಟರಿ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈರವರು ರೋಟರಿ ಪಿನ್ ತೊಡಿಸಿ ಕ್ಲಬ್ ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು.

ಕ್ಲಬ್ ಸಾಧಕರಿಗೆ ಗೌರವ

ಕ್ಲಬ್ ಸದಸ್ಯರಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯ್ದ ಭಾರತದ ಪ್ಯಾರಾ ಅಥ್ಲೆಟಿಕ್ ಸಂಸ್ಥೆಯು ನಡೆಸಿದ ರಾಷ್ಟ್ರೀಯ ತಾಂತ್ರಿಕ ಅಧಿಕಾರಿಗಳ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಗಳಿಸಿ ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ಪ್ರಥಮ ಬಾರಿಗೆ ಆಯೋಜಿಸುವ ವಿಶ್ವ ಪ್ಯಾರಾ ಅಥ್ಲೆಟಿಕ್ ಮೀಟ್ ನಲ್ಲಿ ತಾಂತ್ರಿಕ ಅಧಿಕಾರಿಯಾಗಿ ಆಯ್ಕೆಯಾದ ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾದ ಉದ್ಘೋಷಕರಾಗಿರುವ ಡಾ.ರಾಮಚಂದ್ರ ಕೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, 67 ಬಾರಿ ರಕ್ತದಾನ ಮಾಡಿರುವ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ತಮ್ಮ 12 ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಪಿಯರ್-ಮೌಲ್ಯಾಂಕಿತ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಭಾರತಿ ಎಸ್.ರೈ,  ಸರಸ್ವತಿ ಕ್ರೆಡಿಟ್ ಸೌಹಾರ್ದ ಪುತ್ತೂರು ಸಂಸ್ಥೆಯು 2025-26ನೇ ವರ್ಷಾರಂಭದಲ್ಲಿ 700 ಕೋಟಿ ವ್ಯವಹಾರ ದಾಖಲಿಸುವಲ್ಲಿ ಸಫಲರಾಗಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ್ ನಾಯಕ್, ಕ್ಲಬ್ ಸದಸ್ಯರ ಮಕ್ಕಳಾಗಿದ್ದು ಸಾಧನೆಗೈಯ್ದಿರುವ ಸಾಧಕರಾದ ಆಟೋಮ್ಯಾಟಿಕ್ ಫೈರ್ ಫೈಟಿಂಗ್ ರೊಬೋಟ್ ಮಾದರಿಗೆ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಭುವನ್ ಎನ್.ಎಂ(ಬಿ.ಟಿ ಮಹೇಶ್ಚಂದ್ರ ಸಾಲಿಯಾನ್ ರವರ ಪುತ್ರ), ಪದವಿ ಪೂರ್ವ ವಿಜ್ಞಾನ ವಿಭಾಗದಲ್ಲಿ ಶೇ.96.16 ಅಂಕ ಗಳಿಸಿದ ವಿಖ್ಯಾತಿ ಬೆಜ್ಜಂಗಳ(ಡಾ.ರಾಜೇಶ್ ಬೆಜ್ಜಂಗಳರವರ ಪುತ್ರಿ), ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.545 ಅಂಕ ಗಳಿಸಿದ ಧನ್ವಿನ್ ಸುಜಗ(ಜಗನ್ನಾಥ ಅರಿಯಡ್ಕರವರ ಪುತ್ರ), 541 ಅಂಕ ಗಳಿಸಿದ ತಾಜುನ್ನೀಸಾ(ಪಿ.ಎಂ ಅಶ್ರಫ್ ರವರ ಪುತ್ರಿ), ಸಾಧನ್ ಪಿ(ಜಯಪ್ರಕಾಶ್ ನಾಯ್ಕ್ ರವರ ಪುತ್ರ), ಸಾಫ್ಟ್‌ವೇರ್ ಸಂಸ್ಥೆ ಥಾಟ್ ಫೋಕಸ್ ನಲ್ಲಿ ಲೀಡ್ ಇಂಜಿನಿಯರ್ ಆಗಿದ್ದು, ಕ್ಯಾಲಿಫೋರ್ನಿಯಾದಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಗೆ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸಲಿರುವ ಪ್ರಥ್ವಿ ಸಿ.ರೈ(ಚಂದ್ರಹಾಸ ರೈರವರ ಪುತ್ರಿ)ರವರುಗಳನ್ನು ಅಭಿನಂದಿಸಲಾಯಿತು.

ಟಿ.ಆರ್.ಎಫ್ ದೇಣಿಗೆ

ಅಂತರ್ರಾಷ್ಟ್ರೀಯ ಸರ್ವಿಸ್ ನಡಿಯಲ್ಲಿ ರೋಟರಿ ಫೌಂಡೇಶನ್ ಗೆ ಟಿ.ಆರ್.ಎಫ್ ದೇಣಿಗೆ ನೀಡಿ ಪಿ.ಎಚ್.ಎಫ್ ಪದವಿ ಗಳಿಸಿರುವ ಸದಸ್ಯರಾದ ಪದ್ಮನಾಭ ಶೆಟ್ಟಿ, ಡಾ.ರಾಜೇಶ್ ಬೆಜ್ಜಂಗಳ, ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿರವರ ಪುತ್ರ ಅಭಿಜ್ಞಾ ಶೆಟ್ಟಿ, ಕಮ್ಯೂನಿಟಿ ಎಕನಾಮಿಕ್ ಡೆವೆಲಪ್ಮೆಂಟ್ ಇದರ ಜಿಲ್ಲಾ ಚೇರ್ಮನ್ ಆಗಿ ಆಯ್ಕೆಯಾದ ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿರವರುಗಳನ್ನು ಗೌರವಿಸಲಾಯಿತು.

ವಿದ್ಯಾರ್ಥಿವೇತನ ವಿತರಣೆ

ಕ್ಲಬ್ ಸದಸ್ಯರಾಗಿದ್ದು ಕೊರೋನಾ ಸಂದರ್ಭದಲ್ಲಿ ಅಗಲಿದ ಶ್ರೀಧರ್ ಕೋಡಿಜಾಲುರವರ ಸ್ಮರಣಾರ್ಥ ವಿಕ್ಟರ್ಸ್ ಶಾಲೆಯ ತನುಶ್ರೀ, ದೀಕ್ಷಾ, ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ಜಸ್ಮಿತಾ, ಶ್ರಾವ್ಯ,ಕೊಂಬೆಟ್ಟು ಪ್ರೌಢಶಾಲೆಯ ತುಶಾಂತ್ ರವರುಗಳಿಗೆ ಯೂತ್ ಸರ್ವಿಸ್ ನಡಿಯಲ್ಲಿ ವಿದ್ಯಾರ್ಥಿ ವೇತನವನ್ನು ಹಸ್ತಾಂತರಿಸಲಾಯಿತು.

ದೀಪಿಕಾ ವಸಂತ್ ಪ್ರಾರ್ಥಿಸಿದರು. ಕ್ಲಬ್ ನಿರ್ಗಮಿತ ಅಧ್ಯಕ್ಷ ಪಿ.ಎಂ ಅಶ್ರಫ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಜಯಪ್ರಕಾಶ್ ಎ.ಎಲ್ ವಂದಿಸಿದರು. ನಿಕಟಪೂರ್ವ ಕಾರ್ಯದರ್ಶಿ ವಸಂತ್ ಶಂಕರ್ ವರದಿ ಮಂಡಿಸಿದರು. ಕ್ಲಬ್ ಸದಸ್ಯರಾದ ಪದ್ಮನಾಭ ಶೆಟ್ಟಿ, ರಮೇಶ್ ರೈ ಬೋಳೋಡಿ, ಪ್ರದೀಪ್ ಪೂಜಾರಿ, ಶ್ರೀಮತಿ ಅಮಿತಾ ಶೆಟ್ಟಿರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಅತಿಥಿಗಳ ಪರಿಚಯವನ್ನು ಡಾ.ರಾಜೇಶ್ ಬೆಜ್ಜಂಗಳ(ಪದ ಪ್ರದಾನ ಅಧಿಕಾರಿ), ಜಗನ್ನಾಥ ಅರಿಯಡ್ಕ(ನೂತನ ಅಧ್ಯಕ್ಷರು), ವಸಂತ್ ನಾಯಕ್(ನೂತನ ಕಾರ್ಯದರ್ಶಿ), ಬಿ.ಟಿ ಮಹೇಶ್ಚಂದ್ರ ಸಾಲಿಯಾನ್(ಕೋಶಾಧಿಕಾರಿ), ಭಾರತಿ ಎಸ್.ರೈ(ಅಸಿಸ್ಟೆಂಟ್ ಗವರ್ನರ್), ಶಿವರಾಮ ಎಂ.ಎಸ್(ವಲಯ ಸೇನಾನಿ), ವೊಕೇಶನಲ್ ಸರ್ವಿಸ್ ನಿರ್ದೇಶಕ ಡಾ.ರಾಮಚಂದ್ರ ಹಾಗೂ ಟೀಚ್/ಸಿ.ಎಲ್.ಸಿ‌.ಸಿ ಚೇರ್ಮನ್ ಶ್ರೀಮತಿ ಭಾರತಿ ಎಸ್.ರೈ ಕಾರ್ಯಕ್ರಮ ನಿರೂಪಿಸಿದರು.

ಸಾವಿರ ಮಕ್ಕಳಿಗೆ “ಅರಿವು” ಯೋಜನೆ ತಲುಪಿಸುವ ವಿಶ್ವಾಸ
ಕ್ಲಬ್ ಸದಸ್ಯರ ವಿಶ್ವಾಸ ಹಾಗೂ ನಿರೀಕ್ಷೆಗಳನ್ನು ಹುಸಿಗೊಳಿಸದೆ ಎಲ್ಲರ ಸಹಕಾರದೊಂದಿಗೆ ಕ್ಲಬ್ ಅನ್ನು ಮುನ್ನೆಡೆಸಲು ಉತ್ಸುಕನಾಗಿದ್ದೇನೆ. ರೋಟರಿ ಧ್ಯೇಯದಂತೆ ಮಿತೃತ್ವ, ಒಡನಾಟ ಹಾಗೂ ಸೇವೆಗೆ ಪ್ರಾಶಸ್ತ್ಯ ನೀಡುವ ಮೂಲಕ ಕ್ಲಬ್ ನಲ್ಲಿ ಸದಸ್ಯತನ ಹೆಚ್ಚಿಸುವಲ್ಲಿ ಹಾಗೂ ಉಳಿಸಿಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ. ಕ್ಲಬ್ ನ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಎನಿಸಿದ ಅರಿವು ಯೋಜನೆಯನ್ನು ಪ್ರಸಕ್ತ ವರ್ಷ ಸುಮಾರು ಹತ್ತು ಶಾಲಾ ಕಾಲೇಜುಗಳ ಒಂದು ಸಾವಿರ ವಿದ್ಯಾರ್ಥಿಗಳಿಗೆ ಮುಟ್ಟುವ ಕಾರ್ಯವನ್ನು ಮಾಡುವ ವಿಶ್ವಾಸ ಹೊಂದಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಕ್ಲಬ್‌ನಲ್ಲಿ ಸಮಾಜಮುಖಿ ಯೋಜನೆಗಳನ್ನು ಹಾಕಿ ಅವನ್ನು ಸಮಾಜಕ್ಕೆ ಮುಟ್ಟಿಸುವ ಕಾರ್ಯಗಳಿಗೆ ಚಾಲನೆ ನೀಡಲಿದ್ದೇವೆ.
ಚಂದ್ರಹಾಸ ರೈ.ಬಿ, ನೂತನ ಅಧ್ಯಕ್ಷರು, ರೋಟರಿ ಕ್ಲಬ್ ಸೆಂಟ್ರಲ್

ಸನ್ಮಾನ

ಕಳೆದ ಸಾಲಿನಲ್ಲಿ ಕ್ಲಬ್ ಅನ್ನು ಅತ್ತ್ಯುತ್ತಮವಾಗಿ ಮುನ್ನೆಡೆಸಿ ಕ್ಲಬ್‌ ಡೈಮಂಡ್ ಪ್ರಶಸ್ತಿಗೆ ಭಾಜನರಾಗಲು ಸಹಕರಿಸಿದ ಅಧ್ಯಕ್ಷ ಪಿ.ಎಂ ಅಶ್ರಫ್ ಮುಕ್ವೆ, ಕಾರ್ಯದರ್ಶಿ ವಸಂತ್ ಶಂಕರ್, ಕೋಶಾಧಿಕಾರಿ ನವೀನ್ ಚಂದ್ರ ನಾಯ್ಕ್ ರವರುಗಳನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಪದ ಪ್ರದಾನ

ಕ್ಲಬ್ ನೂತನ ಅಧ್ಯಕ್ಷ ಚಂದ್ರಹಾಸ ರೈ ಬಿ, ಕಾರ್ಯದರ್ಶಿ ಜಯಪ್ರಕಾಶ್ ಎ.ಎಲ್, ಕೋಶಾಧಿಕಾರಿ ಎ‌.ಶಾಂತ ಕುಮಾರ್, ಜೊತೆ ಕಾರ್ಯದರ್ಶಿ ಜಗನ್ನಾಥ ಅರಿಯಡ್ಕ, ನಿಯೋಜಿತ ಅಧ್ಯಕ್ಷ ಶಿವರಾಮ ಎಂ.ಎಸ್, ಉಪಾಧ್ಯಕ್ಷ ಪ್ರದೀಪ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಅಶ್ರಫ್ ಪಿ.ಎಂ, ಕ್ಲಬ್ ಸರ್ವಿಸ್ ನಿರ್ದೇಶಕ ಬಿ.ಸನತ್ ಕುಮಾರ್ ರೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಮೊಹಮ್ಮದ್ ರಫೀಕ್ ದರ್ಬೆ, ವೊಕೇಶನಲ್ ಸರ್ವಿಸ್ ನಿರ್ದೇಶಕ ಡಾ.ರಾಮಚಂದ್ರ ಕೆ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ಎಂ.ದಿವಾಕರ್ ರೈ, ಯೂತ್ ಸರ್ವಿಸ್ ನಿರ್ದೇಶಕ/ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್  ಡಾ.ರಾಜೇಶ್ ಬೆಜ್ಜಂಗಳ, ಸಾರ್ಜಂಟ್ ಎಟ್ ಆಮ್ಸ್೯/ಫೆಲೋಶಿಪ್ ಪ್ರದೀಪ್ ಬೊಳ್ವಾರು, ಬುಲೆಟಿನ್ ಎಡಿಟರ್ ವಸಂತ್ ಶಂಕರ್, ಚೇರ್ಮನ್ ಗಳಾದ ಜಗನ್ನಾಥ ಅರಿಯಡ್ಕ(ವೆಬ್ & ಡಿಜಿಟಲ್ ರೋಟರಿ), ಮಹೇಶ್ಚಂದ್ರ ಸಾಲಿಯಾನ್(ಪಲ್ಸ್ ಪೋಲಿಯೊ), ಭಾರತಿ ಎಸ್.ರೈ(ಟೀಚ್, ಸಿ.ಎಲ್.ಸಿ.ಸಿ), ಲಾವಣ್ಯ ನಾಯ್ಕ್(ಟಿ.ಆರ್‌ಎಫ್), ಜಯಪ್ರಕಾಶ್ ಅಮೈ(ಮೆಂಬರ್ ಶಿಪ್ ಡೆವಲಪ್ಮೆಂಟ್), ನವೀನ್ ಚಂದ್ರ ನಾಯ್ಕ್(ಡಿಸ್ಟ್ರಿಕ್ಟ್ ಪ್ರಾಜೆಕ್ಟ್), ಸಂತೋಷ್ ಶೆಟ್ಟಿ(ಕ್ರೀಡೆ), ವಸಂತ್ ನಾಯಕ್ ಅಜೇರು(ಸಾಂಸ್ಕೃತಿಕ/ಕ್ಲಬ್ ಯಂಗ್ ಲೀಡರ್ಸ್ ಕಾಂಟಾಕ್ಟ್), ಪಿ.ಎಂ ಅಶ್ರಫ್ ಮುಕ್ವೆ(ಹಾಜರಾತಿ), ಕಿರಣ್ ಬಿ.ಎಂ(ವಿನ್ಸ್), ರಮೇಶ್ ರೈ ಬೋಳೋಡಿ(ಎಥಿಕ್ಸ್), ಗಿರೀಶ್ ಕೆ.ಎಸ್(ಪಬ್ಲಿಕ್ ಇಮೇಜ್)ರವರಿಗೆ ಪದ ಪ್ರದಾನ ಅಧಿಕಾರಿ ಪಿಡಿಜಿ ಡಾ.ಭಾಸ್ಕರ್ ಎಸ್.ರವರು ಪದ ಪ್ರದಾನವನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here